ಏನು ಆಗದೆ ಎಲ್ಲವೂ ಆಗಿಹೋಯ್ತು

ಉರಿಸದೆ ಹತ್ತಿಕೊಂಡ ದೀಪ
ಆರಿಸದಿದ್ದರೂ ಆರಿಹೋಯ್ತು.

ಬೀಜವಿಲ್ಲದೇ ಬೆಳೆದ ಮರ
ಹಣ್ಣಾಗುವ ಮುನ್ನವೇ ಮಣ್ಣಾಯ್ತು.

ಕಣ್ಮುಚ್ಚಿದರೂ ಕಾಣುತಿದ್ದ ನಿನ್ನ ಮುಖ
ಕಣ್ತೆರೆದು ಹುಡುಕಾಡಿದರೂ ಕಾಣದಾಯ್ತು.

ಮೋಡ ಕವಿಯದೆ ಬಿದ್ದ ಮಳೆ
ಭೂಮಿ ತಾಕುವ ಮುನ್ನವೇ ಹಾವಿಯಾಯ್ತು.

ಬೆಂಕಿಯಲ್ಲಿ ಅರಳಿದ ಹೂವು
ನೀರೆರೆದರೆ ಬಾಡಿ ಹೋಯ್ತು.

ನಿದ್ದೆ ಕೂಡದ ನಿನ್ನ ಕನಸುಗಳು
ನನ್ನನು ಚಿರನಿದ್ರೆಗೆ ಜಾರಿಸಿತು.

ಸುಗಂಧ ಚೆಲ್ಲುವ ಹೂವೇ ಇಂದು
ಹಾವಾಗಿ ವಿಷ ಕಾರಿತು.

ದುಂಬಿ ಹೀರಿದ ಮಕರಂದವೇ
ಮರಣವಾಗಿ ಅದರ ಪ್ರಾಣ ಹರಣ ಮಾಡಿತು.

ಹೃದಯ ಬಡಿತವಾಗಿದ್ದ ನಿನ್ನ ನೆನಪುಗಳೇ
ನನಗಿಂದು ಹೃದಯಾಘಾತ ನೀಡಿತು.

ಬರಡು ನೆಲದ ಮೇಲೆ ಬದುಕಿದ ಮೀನು
ತುಂಬಿದ ನದಿಯಲ್ಲಿ ಬಿಟ್ಟರೂ ಬದುಕದಾಯ್ತು.

ಹೇಳದೆ ಹೊರಬಂದ ಮಾತು
ಕೇಳದಿದ್ದರೂ ಅರ್ಥವಾಯಿತು.

ಕೇಳದೆ ನೀ ನನಗೆ ಕೂಟ್ಟ ಹೃದಯ
ಹಿಡಿದಿಟ್ಟರೂ ಇರಲಾರದೆ ಪುನಃ ನಿನ್ನ ಸೇರಿತು.

ಬೆಂಕಿಯೇ ಇಲ್ಲದೆ ಮೂಡಿದ ಕಿಡಿ
ನೀರು ತಾಗಿ ಧಗಧಗನೇ ಉರಿಯಿತು.

ನೋವೇ ನಿನ್ನ ನಗುವಿನ ರೂಪ ತೆಳೆದು
ತಿಳಿಯದೆಯೇ ನನ್ನ ಬದುಕ ಹಿಂಡಿತು..

- ಇಂತಿ ಅಳುವಿನ ಮಡುವಿನಲಿ ಶಶಿ ಕಿರಣ಼

- ಅಕವಿ

30 Jan 2017, 07:40 pm
Download App from Playstore: