ನಿನ್ನ ನೆನಪಲಿ
ನಿನ್ನ ನೆನಪಲಿ
ನಿನ್ನ ಪ್ರೀತಿಯಲ್ಲಿ
ಮುಳುಗಿರುವೆ ನಾನು
ನನ್ನ ಉಳಿಸುವರು ಯಾರು?
ನಿನ್ನ ಒಲವಿನ ಅಂಗಳದಲ್ಲಿ
ಸಮಾಧಿ ಆಗಿರುವೆ
ನನ್ನ ಹೊರ ತೆಗೆಯುವರು ಯಾರು?
ನಿನ್ನ ಪ್ರೀತಿಯ ತಂಗಾಳಿ
ಹಾರಿಸಿದೆ ನನ್ನ ಗಾಳಿ ಪಟದಂತೆ
ಆ ಬಾನಿನ ಅಂಚಿನತ್ತ
ನನ್ನ ಮರಳಿ ತರುವವರು ಯಾರು?
ಒಲವಿನ ಬೆಂಕಿ ಸುಡುತಿದೆ
ನನ್ನ ಎದೆಯನು
ನನ್ನ ಅಪ್ಪಿ, ಬೆಂಕಿಯ ನಂದಿಸುವರು ಯಾರು?
- ಕುಮಾರ ಸಿದ್ದರಾಜ
30 Jan 2017, 09:00 pm
Download App from Playstore: