ನಮ್ಮೂರ ಸಂಕ್ರಾಂತಿ
ನಮ್ಮೂರ ಸಂಕ್ರಾಂತಿ
ಸಿದ್ಧರಾಮನ ಜಾತ್ರಿಗೆ ಹೋಗೋಣ ಬಾ ಗೆಳತಿ
ನಾಡೆಲ್ಲಾ ಬರುತ್ತದೆ ನೋಡಾಕ!
ಸಂಕ್ರಾಂತಿ ಹಬ್ಬಕ ಸಿದ್ಧರಾಮನ ಮದುವೆ
ಸಂಜೆ ನಂದಿಕೋಲ ಮುಗಿಲಕ್ಕ!!
ನೀನಾದರು ಬಂದರೆ ನಾನಾದರೂ ಬರತೇನ
ನಮ್ಮಿಬ್ಬರ ಹೊಸಮಾತು ಜಾತ್ರ್ಯಾಗ ನನ್ನವಳೆ
ಸಂಕ್ರಾಂತಿ ಸವಿನೆನಪು ಮನದಾಗ,!!
ಹತ್ತಿರ ಬಂದಾಗ ಮತ್ತೇನು ಹೇಳಲಿ ಕಯಿ ಹಿಡಿದು ಮುಂದೆ ನಡೆದಾಗ ! ಹಳೆನೆನಪು ಮೂಡಿತ್ತ ಮಾವಿನ ಬನದಾಗ!!
ಬೆಳದಿಂಗಳಲ್ಲಿ ಕಂಡ ಬೆಳ್ಳಕ್ಕಿಹಿಂಡಿನಂತೆ ನೀ ಬರುವ ದಾರಿ ಕಾಯ್ದೇನ! ನನ್ನ ಚಿನ್ನಾ ಬಾಳ ನೆನದೇನ ಮನದಾಗ!!
ಜಾತ್ರಿಗೆಲ್ಲರು ಬಂದು ಕಯಿ ಮಾಡಿ ನಮ್ಮವ್ವ ಕಣ್ಣಲ್ಲೇ ಕೇಳಿದಳು ಮಂದ್ಯಾಗ ! ನಿನ್ನನೋಡಿ ಅವಳ್ಯಾರೋ ನಿನ್ನ ಹತ್ತಿರದಾಗ ಅಂತ!!
ಹಕ್ಕಿಯ ಇಂಚರ ಚುಕ್ಕಿಯ ಚಿತ್ತಾರ ಮುಗಿಲ ತುಂಬಿದೆ ಸಿಂಗಾರ ! ನನ್ನ ಗೆಳತಿ ನೀ ನನ್ನ ಪ್ರೇಮದ ಸಿಂಧೂರ ನನ್ನ ದೆಯ ವಿಣೆ ನಿನು
"""" ಮಲ್ಲಿಕಾರ್ಜುನ """"""
- Mallikarjun
31 Jan 2017, 07:40 am
Download App from Playstore: