ಮಮಕಾರ

ಜೋರಾಗಿ ಬೀಸುತ್ತಿರುವ ಮಳೆ...
ಹೆದರಿ ಮುದ್ದೆಯಾಗಿರುವ ಕಾಗೆ ಮರಿ ತನ್ನ ತಾಯಿಗಾಗಿ ಹಂಬಲಿಸುತ್ತಿರಲು...
ಹಸಿದ ನಾಯಿಯೊಂದು ಬಾಯಿ ಚಪ್ಪರಿಸಿಕೊಂಡು ಅತ್ತ ಕಡೆ ಧಾವಿಸುತ್ತಿದೆ..
ಗಾಳಿಯ ರಭಸಕ್ಕೆ ಮರದ ರೆಂಬೆ ತುಂಡಾಗಲು,ಮರಿಯ ಗೂಡು ಕೆಳಗೆ ಬೀಳಲು...
ಅಯ್ಯೋ!! ಕಾಗೆ ಮರಿಯ ಅರಚಾಟ ಕೇಳಲಾಗದು...
ಆ ಸಮಯದಲ್ಲಿ ತಾಯಿ ಕಾಗೆಯು ಹಾರಿಬರಲು..
ನಾಯಿಯಲ್ಲಿ ಬೇಡಿಕೊಂಡಿತು ಹೀಗೆಂದು,
ಮುಟ್ಟದಿರು ,ತಿನ್ನದಿರು ಓ ಎನ್ನ ಅಣ್ಣ..
ಕಂದಮ್ಮನಿಲ್ಲದೆ ನಾ ತಾನೇ ಹೇಗೆ ಬದುಕಲಿ..
ತನ್ನ ತಿಂದು ಎನ್ನಕಂದನ ಜೀವ ಉಳಿಸೆಂದು ಪರಿ ಪರಿಯಾಗಿ ಕೇಳಲು...
ನಾಯಿಯ ಮನಃ ಕರಗಲು ಮರಿಯನ್ನು ಮುಟ್ಟದೆ ಹೊರಟು ಹೋಯಿತು...

- ನಮಿತ ಗಟ್ಟಿ

31 Jan 2017, 11:32 am
Download App from Playstore: