ನನ್ನವಳ ದುರವಿದ್ದಾಗ
ಹೇ...ಗೆಳತಿ...ಹೇಗಿದ್ದೀಯಾ...?
ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ....? ಎಲ್ಲಿದ್ದೀಯ....? ಏನು ಮಾಡ್ತಿದ್ದೀಯಾ...?
ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ...ನಿನ್ನ ಉತ್ತರ ಕೇಳಿ....ನನಗೆ ತುಂಬಾ ಸಮಾಧಾನ ಆಯ್ತು...!
ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ...ನಿನ್ನೆದುರಿಗೆ ವ್ಯಕ್ತಪಡಿಸೋದು...?
ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ...!!
ನಮ್ಮ ಹಿಂದಿನ ಸವಿ....ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ...!!
ಅವತ್ತು ಸವಿಯಾಗಿದ್ದ ....ಪ್ರೀತಿ ಇಂದಿಗೂ ನನಗೆ ಸವಿಯೇ...!!
ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ....!!
ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ ಆಗಲ್ಲ...!! ಹೋಗಲಿ ಬಿಡು..ಗೆಳತಿ...!!
ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು ನಿಜವಾಗಿಯೂ ಒಂದು ಸಾಹಸವೇ ಹೌದು...!!
ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ...ತೊದಲುತ್ತಿದೆ...!!
ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು....!!
ನಾವೇನು ಪ್ರೀತಿಗಾಗಿ ತಾಮಹಲ್ ಕಟ್ಟಬೇಕಾಗಿರಲಿಲ್ಲ...ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು..!!
ಈ... ದಿನ ನಿನ್ನ ಬದುಕು ಹಸನಾಗಿದೆ....ಪರವಾಗಿಲ್ಲ...!!
ಸಾವಿನ ಹಾದಿಯಲಿ ಉಸಿರು ಹುಡುಕುವವನು ನಾನು...!!
ನಿನ್ನ ಬದುಕು ...ಹೀಗೆ...ಸುಂದರವಾಗಿರಲೆಂದೆ ನನ್ನ ಹಾರೈಕೆ....!!
"" ಮಲ್ಲಿಕಾರ್ಜುನ ""
- Mallikarjun
31 Jan 2017, 03:09 pm
Download App from Playstore: