ನೀನೆಂದರೆ .......

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ಮಾಯೆಯೊಳಗೆ ಬಂದ ನನ್ನ ಕನಸು ನೀನೇ
ಜೀವಕ್ಕಿಂತ ನಿನ್ನ ಹೆಚ್ಚು ಪ್ರೀತಿಸೋನು ನಾನೇ
ಕಣ್ಣೀರ ಒರೆಸೋಳು ನೀನೇ ತಾನೇ
ಹೃದಯನ ದೋಚಿದೋಳು ನೀನೇ ತಾನೇ

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ನಿನ್ನಿಂದ ನಾನು ನನಗಾಗೆ ಹುಟ್ಟಿದವಳು ನೀನು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನಸ್ಸಿನ ಬಾಗಿಲ ತೆರೆದು
ಕಣ್ಣು ಮುಚ್ಚಿ ತೆರೆಯೋದಕ್ಕೂ ಮುಂಚೆ ಮಿಂಚಿ ಮರೆಯಾದವಳು ನೀನೇ ತಾನೇ ..

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ಎಲ್ಲಿರುವೆ ನನ್ನ ಮನದರಸಿ
ಬರಲಾರೆಯಾ ನೀ ನನ್ನ ಬಯಸಿ..
ಕಾದು ಕಾದು ಸಾಕಾಯಿತು
ನಿನ್ನ ನೆನೆದು ಈ ಹೃದಯ ಭಾರವಾಯಿತು.!!

- ನಮಿತ ಗಟ್ಟಿ

31 Jan 2017, 04:49 pm
Download App from Playstore: