ಮುರಿದ ಕೊಳಲು...

ಹೇ ಮನಸೇ.....
ದೂರವಾಗುವ ಮುಂಚೆ ನೆನಪಾಗಲಿಲ್ಲ ಯಾಕೆ....
ನನ್ನೀ ಹೃದಯದ ಪ್ರತಿ ನಾಡಿಮಿಡಿತದಲ್ಲೂ ನಿನ್ನದೆ ನೆನಪು ...
ಸಮುದ್ರದ ಅಲೆಗಿಂತಲೂ ರಭಸವಾಗಿ
ಸುಂಟರ ಗಾಳಿಗಿಂತಲೂ ಬಿರುಸಾಗಿ
ನನ್ನ ಮನವನ್ನು ಛಿದ್ರ ಮಾಡಿತ್ತು ಆ ನಿನ್ನ ಮಾತು....
ನನ್ನ ಕಣ್ಣೀರ ಪ್ರತಿ ಹನಿಯು ಸಾರುತ್ತಿದೆ ನಿನ್ನದೇ ಹೆಸರು...
ಅರ್ಥವಾದರೂ ನೀ ಯಾಕೆ ಸುಮ್ಮನಿರುವೆ..
ನೀರಿನಾಸರೆ ಇಲ್ಲದೆ ಮೀನು ಎಂದಾದರೂ ಬದುಕವುದೇ..
ರೆಕ್ಕೆ ಮುರಿದ ಹಕ್ಕಿ ಎಂದಾದರೂ ಹಾರುವುದೇ...
ನೀನಿರದ ಈ ಬಾಳು ಅದಕ್ಕಿಂತಲೂ ಘೋರವಾದುದು...

- ನಮಿತ ಗಟ್ಟಿ

31 Jan 2017, 09:06 pm
Download App from Playstore: