ಸಮಾಧಿಗಳ ಸುಳಿಯಲ್ಲಿ.......

ಜೀವಿಗಳ ಒಡನಾಡಿಯಲ್ಲಿ
-ದ್ದಾಗ ಜೀವ,
ಪ್ರಾಣವಿಲ್ಲದ ಬಳಿಕ ಶವ
ಬದುಕಿರುವಾಗ ಹೆಸರಿತ್ತು
ಉಸಿರೇ ಇರಲಿಲ್ಲ....

ವೇದಿಕೆಯ ರಂಗದ ಪ್ರತಿನಡಿಗೆಯಲ್ಲೂ ವಿಧಿಯ ನಿಶ್ಯಬ್ದ ಕಿರುಚಾಟ,ಹಣೆಬರಹದ
ಅಣುಕು ಮೋರೆಯ
ಹಾಸ್ಯದ ಕರತಾಡನ..

ಪಾಪ,ಪುಣ್ಯಗಳು
ಪ್ರಾಮಾಣಿಕ,ಅನಿವಾರ್ಯತೆಯ ಸಂಘರ್ಶಗಳು,
ತೀರಿದ ನಂತರ ಬರುವವು ಅವೊಂದೆ..

ದೌರ್ಜನ್ಯಗಳ ವಿಸ್ಮಯ,ಅಟ್ಟಹಾಸಗಳ ರಿಂಗಣ,ಬವಣೆಗಳ ಸುನಾಮಿಯಂತ ದೈತ್ಯ ನರ್ತನ
ಭಾವಭಂಗಿಯ ಮೂಕ ರೋದನ,ಕೊನೆಗೆ ಜೊತೆಯಿಲ್ಲದ ಪಯ....ಣ ಸಮಾಧಿಗಳ ಸುಳಿಯಲಿ

- ನಕ್ಷtra

31 Jan 2017, 11:37 pm
Download App from Playstore: