ಮಧ್ಯಂತರ

ಆಕಾಶಕೂ ಈ ಭೂಮಿಗೂ
ಇರುವ ಅಂತರ ಅಗಾಧವು!!
ಆಕಾಶದ ಆ ಮೌನವು
ಈ ಭೂಮಿಗೆ ಸಾಕಾದವು!!

ಮಳೆಯ ತಾ ಕಾಣದೆ
ಇಳೆಯು ದಂಗಾಗಿದೆ!!
ಇನಿಯನ ಮೌನದಿ
ಇಳೆಯು ತಾ ನೊಂದಿದೆ!!

ಆ ಬಾನಿಗೆ ಕೈ ಚಾಚುತ
ಈ ಮೌನವು ಸಾಕೆಂದಿದೆ!!
ಸವಿ ಪ್ರೀತಿಯ ಸಂದೇಶವ
ಸಂತೋಷದಿ ನೀಡೆಂದಿದೆ!!

ಆಕಾಶದೀ ಸಂದೇಶವ ಆ ನೇಸರ
ಕಿರಣದಂತೆ ಭೂವಿಗೆ ಚೆಲ್ಲಿದ!!
ಈ ಭೂಮಿಯ ಜಲರಾಶಿಯ
ಆವಿ ಮಾಡಿ ಕೊಂಡು ಹೋದನು!!

ಆಕಾಶನು ಈ ಭೂಮಿಯ
ತಂಪಾದ ಒಲವ ಬಾಚಿ ತಬ್ಬಿದ!!
ಮಧ್ಯಂತರ ಮೋಡವ ಮಾಡಿ
ಪ್ರೀತಿಯ ಹನಿಗಳ ಭೂವಿಗೆ ಚೆಲ್ಲಿದ!!

ಈ ಭೂಮಿಗೆ ವಸಂತವು
ಇಳೆಯೆಲ್ಲವೂ ತಂಪಾದವು!!
ಜಲರಾಶಿ ಮೈದುಂಬಿ ವನವೆಲ್ಲ ಹಸಿರಾಗಿ
ವಿರಹದ ಬೇಗೆ ಮರೆಯಾದವು!!

- ಪಿ.ಜಿ.ಜ್ಯೋತಿ

01 Feb 2017, 11:42 am
Download App from Playstore: