ಬಂಧನ
ಗಿಣಿಯೇ ಗಿಣಿಯೇ ಕೊರಗೋ ದನಿಯೇ
ಪಂಜರದಲ್ಲಿ ನಿನ್ನ ಬಂಧನವೇ!!
ಮುಗಿಲ ಕಡೆಗೆ ಸಾಗೋ ಬಯಕೆ
ಉಳಿದೇ ಹೋಯ್ತು ಯಾಕೀತರವೇ!!
ನಾನು ನೀನು ಒಳಗೆ ಹೊರಗೆ
ಇರುವಿವೆಂಬ ಭಾವ ಭಿನ್ನವಾಗಿದೆ!!
ಪಂಜರದಲ್ಲಿ ನಿನ್ನ ಬಂಧಿ ಮಾಡಿಬಿಟ್ಟರು
ಮಾತಿನಲ್ಲಿ ನನ್ನ ಬಂಧಿ ಮಾಡಿಬಿಟ್ಟರು!!
ಯಾಕೀತರವೇ ಮೌನ ಸರಿಯೇ
ಮಾತಾಡದೆಯೇ ನಾವು ಸೆರೆಯೇ!!
ಹೇಳು ಗಿಣಿಯೇ ಇದುವೇ ವಿಧಿಯೇ
ನನಗೂ ನಿನಗೂ ಈ ಬಂಧನವೇ!!
ಹಗಲು ಇರುಳು ಸಾಲು ಕಂಬಿ
ಸುತ್ತ ಇಹುದು ಅದುವೇ ನಿನದು!!
ಬರಿದೇ ಹೆಣೆದೆ ಸಾಲು ಕಂಬಿ
ಸುತ್ತ ನಾನೇ ನಡುವೆ ನೊಂದು!!
- ಪಿ.ಜಿ.ಜ್ಯೋತಿ
01 Feb 2017, 12:22 pm
Download App from Playstore: