ಪ್ರೀತಿಯ ನಶೆಯಲಿ.....

ನಿನ್ನಲಿ ನಾನಾಗಿ,
ಇರುವೆ ಮಗುವಾಗಿ,
ಕಾಪಾಡು ಜೋಪಾನವಾಗಿ,
ಉಳಿವೆ ನಿನ್ನಲಿ ಹಾಯಾಗಿ....


ಕಂಡಿಲ್ಲ ಎಲ್ಲೂ ನಿನ್ನಂತ ಹುಡುಗನ್ನ,
ನೀನು ಮರೆಸಿದೆ ಪ್ರೀತಿಯ ಕೊರತೆಯನ್ನ,
ಕಣ್ಣೀರ ಹನಿಯು ಜಾರುವ ಮುನ್ನ,
ಒಡ್ಡು ನಿನ್ನ ಕೈಯನ್ನ...


ನೀನಿರದ ಒಂದು ಕ್ಷಣ,
ಸುಟ್ಟು ಹೋದ ಬನ,
ಸಾವಿನಕಡೆಗೆ ಹೆಜ್ಜೆಯಿಟ್ಟ ಮನ,
ಬರಲಾರದು ಪುನಹ...

ಜೀವನದ ಕೊನೆಯ ಹಾಡನ್ನ,
ಹಾಡಬೇಕು ನಾವಿಬ್ಬರು ಒಂದುಗೂಡಿಸಿ ಧ್ವನಿಯನ್ನ,
ತೊರೆಯಬೇಡ ಒಂಟಿಯಾಗಿ ನನ್ನನ್ನ,
ಬಾಳೋಣ...ಮರೆತು ಈ ಸುಳ್ಳು ಜಗತ್ತನ್ನ....


ಹಾಡಿ ಹೊಗಳಬೇಕು ನನ್ನ-ನಿನ್ನ...
"ಜೋಡಿಯನ್ನ...."....

- Deekshitha Shetty

01 Feb 2017, 03:14 pm
Download App from Playstore: