ಸುರಿವ ಮಳೆಯ ಜೊತೆಯಲಿ

ಸುರಿವ ಮಳೆಯ ಜೊತೆಯಲಿ
ನೆನೆವ ಮನಸು ನನ್ನಲಿ
ಕಂಬನಿ ಧಾರೆ ಕಂಗಳಲ್ಲಿ
ಹರಿದು ಹೋಗಲಿ ಈ ಮಳೆಯ ಜೊತೆಯಲಿ..

ಕಳೆದ ದಿನಗಳ ನೆನಪು
ಕಣ್ಣ ತುಂಬಿ ನಿಂತಿರಲು
ಎದೆಯ ಗದ್ದೆಯಲಿ
ನಿನ್ನ ಪ್ರೀತಿಯೇ ಬಿತ್ತಿರಲು
ನೀ ಎಷ್ಟೇ ದೂರ ಸರಿದರು
ಕರಗದು ನಿನ್ನ ನೆನಪು
ನೆರಳಂತೆ ನಿನ್ನ ಒಲವು
ಬರುತಿದೆ ನನ್ನ ಜೊತೆಯಲಿ
ಸುರಿವ ಮಳೆಯ ಜೊತೆಯಲಿ...

ನೀ ನಗುತ್ತಾ ಇರುವೆ ಎಲ್ಲೂ ಅಲ್ಲಿ
ಹೂ ಮಳೆ ಸುರಿಯುತ್ತಿದೆ ಇಲ್ಲಿ
ನಿನ್ನ ಊಸಿರಿನ ತಂಪು
ತಂಗಾಳಿಯಂತೆ ಬಿಸುತಿದೆ ಇಲ್ಲಿ
ಅಡಗಿ ಕುಳಿತರೆನು ಅಲ್ಲಿ
ಬಾನ ತುಂಬ ನಿನ್ನ ರಂಗವಲ್ಲಿ
ಜೊತೆಯಾಗಿ ನಡೆದ ದಾರಿ ಎದುರಲಿ
ನಿನಗಾಗಿ ಕಾಯುತ ನಿಂತಿರುವೆ ಬಾ ಇಲ್ಲಿ
ಸುರಿವ ಮಳೆಯ ಜೊತೆಯಲಿ....

- ಕುಮಾರ ಸಿದ್ದರಾಜ

01 Feb 2017, 06:05 pm
Download App from Playstore: