ಹೃದಯದ ಮೇಲೆ

ಹೃದಯದ ಮೇಲೆ ಬರೆದಿರುವೆ
ಪ್ರೀತಿಯಿಂದ ಹೆಸರ..
ಹೃದಯ ಮಿಡಿಯುವವರೆಗೂ
ಅಳಿಯದ ಹೆಸರ..
ಪ್ರೀತಿಯ ಉದಾಯಕ್ಕೆ ಕಾರಣವಾದ
ಚಲುವೆ ನಿನ್ನ ಹೆಸರ..

ಕಾಗದದ ಮೇಲೆ ಬರೆದಿಲ್ಲ
ಹರಿದು ಹೋಗಲು ನಲ್ಲೇ..
ಮರಳಿನ ಮೇಲೆ ಬರೆಯಲಿಲ್ಲ
ಅಳಸಿ ಹೋಗಲು ನಲ್ಲೇ..
ಬರೆದಿರುವೆ ಹೃದಯದ ಮೇಲೆ
ಇರುವುದು ಹೃದಯ ಮಿಡಿಯುವವರೆಗೆ !

ನೀರಿನ ಮೇಲೆ ಬರೆದಿಲ್ಲ
ತೇಲಿ ಹೋಗಲು ನಲ್ಲೇ..
ಮೋಡದ ಮೇಲೆ ಬರೆಯಲಿಲ್ಲ
ಕರಗಿ ಹೋಗಲು ನಲ್ಲೇ..
ಬರೆದಿರುವೆ ಹೃದಯದ ಮೇಲೆ
ಇರುವುದು ಹೃದಯ ಮಿಡಿಯುವವರೆಗೆ !

::::::::::::::::

- ಕುಮಾರ ಸಿದ್ದರಾಜ

01 Feb 2017, 08:53 pm
Download App from Playstore: