ಹುಡುಗನ ಪಚೀತಿ,....

ಷಹಜಾನ್ ತನ್ನ ಪ್ರೇಯಸಿಗೆ ತಾಜ್ ಮಹಲ್ ಕಟ್ಟಿದ ಹಾಗೆ,
ನಾನು ಯಾರಿಗಾಗಿ ಏನನ್ನು ಕಟ್ಟಲಿ ಎಂದು ತುಂಟ ನಗು ಬೀರುವಾಗ,
ಎದುರಾದಳು ನನ್ನ ಮನದ ಒಡತಿ,
ಅನಿಸಿತು ಅವಳೇ ನನ್ನ ಮನೆಯ ಗರತಿ,
ನನ್ನ ಶ್ರೀಮತಿ.....

ಕಣ್ಣಿನ ನೋಟವನು,
ಸಹಿಸಲಾರದ ಪಾಪಿ ಆದೆ ನಾ...
ಅವಳ ಮಾತನಾಡುವುದನ್ನು ನೋಡಿ,
ಮೂಗ ಆದೆ ನಾ....

ನಿನಗಿರಬಹುದು ತುಂಬಾ ಜನ ಫ್ಯಾನ್ಸ್,
ಮರೆತು ಬಿಡು ಅವರೆಲ್ಲರನ್ನ,
ಯಾಕಂದ್ರೆ....
ಇನ್ಮುಂದೆ ನಾನೇ ನಿನ್ನ ಯಜಮಾನ...
ಬರೆದಿಟ್ಕೊ ಈ ನನ್ನ ಮಾತನ್ನ....

ನೆನಪಿಸ್ಕೊಳ್ತಾ ಇರು ಆಗಾಗ ನನ್ನನ್ನ,
ಯಾರಿಗ್ ಗೊತ್ತು,....
ಆ "ಆಗಾಗ" ಎನ್ನುವುದು ಮುಂದೆ ಆಗಬಹುದು ಇಡೀ ಜೀವನ....

- Deekshitha Shetty

02 Feb 2017, 02:00 pm
Download App from Playstore: