ಕನ್ನಡ ಶಾಯರಿ

ಒಂಟಿಯಾಗಿ ಯಾರು ಇರಲು ಬಯಸುವುದಿಲ್ಲ
ಪ್ರೀತಿಯ ಆಸರೆ ಹುಡುಕುವರು ಎಲ್ಲ !
ಪ್ರೀತಿಯು ಎಲ್ಲರಿಗೂ ಸಿಗುವ ಭಾಗ್ಯವಲ್ಲ
ಕೆಲವರು ಸಿಕ್ಕ ಪ್ರೀತಿಯನ್ನ ಕಳೆದುಕೊಳ್ಳುವರಲ್ಲ.

ಪ್ರೀತಿಯ ದಾರಿಯಲಿ ನೂರಾರು ಅಡೆತಡೆಗಳು
ಎಲ್ಲವೂ ದಾಟಿ ನಡೆದಾಗ, ನಲಿವಿಗೆ ಪಾರವಿಲ್ಲ !
ನಿನ್ನ ಪ್ರಿತಿಸುವೆ ಎನ್ನಲು ಏಕೆ ಧ್ಯರ್ಯ ಇಲ್ಲ
ಮೆಚ್ಚಿದ ಮೇಲೆ ಹೇಳಿ ಬಿಡಬಹುದಲ್ಲ.

ಹೇಳದೆ ಕಳೆದು ಕೊಳ್ಳುವ ಬದಲು
ಹೇಳಿ ಕಳೆದುಕೊಂಡರೆ ಸಮಾಧಾನವಲ್ಲ !
ಮುಂದೆ ಎಂದೋ ಒಂದು ದಿನ ಮನಸು ಕೆಳಬಹುದಲ್ಲ
ಅಂದು ನೀ ಹೇಳಿದ್ದರೆ, ಇಂದು ಒಂಟಿಯಾಗಿರುತ್ತಿರಲಿಲ್ಲ.

ಪ್ರೀತಿಯ ದಾರಿಯಲ್ಲಿ ಕಳೆದು ಹೂಗುವರಲ್ಲ
ಬಯಸಿದ ಪ್ರೀತಿ ಸಿಗದೇ ಜೀವನ ಸವೆಸುವರಲ್ಲ
ಸಿಕ್ಕ ಪ್ರೀತಿ ಸುಳ್ಳೆಂದು ತಿಳಿದಾಗ ಬೆಯುವರಲ್ಲ
ಪ್ರೀತಿಯು ಸಿಗದಾಗ ಸಾವಿಗೆ ಶರಣಾಗುವರಲ್ಲ.

ಇದ್ದರೆನು ನಾವು ದೂರ ದೂರ
ಮನಸುಗಳಿಗೆ ಅಂತರ ಇರುವುದಿಲ್ಲ
ಪ್ರಿತಿಸುವೆ ನಿನ್ನನು ಎಷ್ಟು ಎಂದು ಹೆಳಲಾಗುತ್ತಿಲ್ಲ
ಆದ್ರೆ, ಒಂಟಿಯಾಗಿ ಯಾರು ಇರಲು ಬಯಸುವುದಿಲ್ಲ.

- ಕುಮಾರ ಸಿದ್ದರಾಜ

02 Feb 2017, 08:33 pm
Download App from Playstore: