ಕಾಪಾಡು ಶಿವನೇ.....
ಸಾಕು ..ಸಾಕು...ಸಾಕು....
ಇನ್ನೆಷ್ಟು ದಿನ ಬೇಕು??
ಕಾಯಿಸೋಕೆ ಅಂತನೇ ನೀ ಹುಟ್ಟಿದ್ಯಾ?
ಇಂದಾದರೂ ದರುಶನ ನೀಡಯ್ಯಾ..
ಎನ್ನ ಬಾಳಿಗೆ ನೀನೇ ಬೆಳಕಯ್ಯಾ..
ಓ ಶಿವನೇ....
ಭಾಗ್ಯದಾತನೇ...
ಕಣ್ಣಿದ್ದು ಕುರಡಾನಾಗಿರುವ ಎನಗೆ
ದಾರಿ ತೋರಿ ಉದ್ಧರಿಸು ಕರುಣಾಕರನೇ..
ಅರಿವೇ ಇಲ್ಲದ ಎನ್ನ ಬಾಳಿಗೆ ಮಮತೆಯ ಸಾರವ ತೋರೆಯಾ...
ಅಂಧಕಾರದಲ್ಲಿ ಕೂಪದಲಿ ಹುದುಗಿರುವ ಎನ್ನ ಆತ್ಮವ ಶುದ್ಧಿಕರಿಸೆಯಾ...
ಗತಿ ನೀನೆ ಎನಗಿಂದು ಶಿವನೇ ಕಾಪಾಡು....
- ನಮಿತ ಗಟ್ಟಿ
02 Feb 2017, 10:30 pm
Download App from Playstore: