ನೆನಪುಗಳ ಸುಳಿಯಲ್ಲಿ
ಅವರ ಇವರ ಮಾತುಗಳ ಮದ್ಯದಲ್ಲಿ
ನಿನ್ನ ನೆನಪುಗಳು ಅತಿಯಾಗಿ ಕಾಡುತ್ತಿವೆ
ಕಾಡುವ ಆ ನೆನಪುಗಳಲಿ ಎಂಥಹ ಸುಖವಿದೆ
ಹಿತ ನೀಡುವ ನೆನಪುಗಳು ನನ್ನಲ್ಲಿ, ಆದರೆ ನಿನ್ನೆಲ್ಲಿ
ನೆನಪುಗಳ ಅಂಗಳದಲ್ಲಿ ನೀನು ಆದರೆ ನಾನೆಲ್ಲಿ
ನೆನಪಲ್ಲಿ ನೀ ನೆನಪಾಗಿ ಎಲ್ಲಿ ಹೋದೆ
ನೆನಪುಗಳ ಮದ್ಯದಲ್ಲಿ ನಾ ಒಂಟಿಯಾದೆ
ಬೆನ್ನು ಬಿಡದ ನೆನಪುಗಳನು ದೂರ ಮಾಡಲಾಗದು
ಅದರಲ್ಲಿ ಅಡಗಿವೆ ನಮ್ಮದೆ ನೂರು ಕನಸುಗಳು
ಮನಸಿಗೆ ಹತ್ತಿರವಾಗಿ, ಕಣ್ಣಿಗೆ ಕಾಣದ ನೆನಪುಗಳು
ನೀ ಕೇವಲ ನೆನಪಾಗಿಯೆ ಉಳಿಯದಿರು
ನೆನಪುಗಳು ಮಧುರ, ನೆನಪುಗಳ ನೆನಪಲಿ ಕಳೆಯಲಾಗದು ಈ ಜೀವನ
ಓ ನೆನಪೇ ನೀ ಜೊತೆಯಾಗುವುದು ಯಾವಾಗ?
- ಕುಮಾರ ಸಿದ್ದರಾಜ
02 Feb 2017, 10:47 pm
Download App from Playstore: