ಸಮಯವಿಲ್ಲ

ಸಂತೋಷದ ನೂರಾರು ಕ್ಷಣಗಳು ಜೊತೆಗಿದ್ದರು
ಅವನ್ನ ಅನುಭವಿಸಿ ನಲಿಯಲು ಸಮಯವಿಲ್ಲ
ದಿನ ರಾತ್ರಿ ಎನ್ನದೆ ಓಡುವ ಈ ಜಗದಲ್ಲಿ
ನಮ್ಮ ಬದುಕನ್ನ ಒಮ್ಮೆ ತಿರುಗಿ ನೋಡಲು ಸಮಯವಿಲ್ಲ !

ಕಂಗಳು ತುಂಬಿ ತುಳುಕುತಿವೆ ನಿದ್ದೆಯಿಂದ
ಆದರೆ ನಿದ್ದೆ ಮಾಡಲು ಸಮಯವಿಲ್ಲ
ಎದೆಯ ತುಂಬ ತುಂಬಿವೆ ನೋವುಗಳು
ಅವುಗಳ ಮರೆಯಲು ಅಳಬೆಕು, ಆದ್ರೆ ಸಮಯವಿಲ್ಲ !

ತಾಯಿ ಹೇಳಿದ ಲಾಲಿಯ ಹಾಡು ನೆನಪಿದೆ
ಆ ತಾಯಿಯನ್ನ ಅಮ್ಮಾ ಎಂದು ಕರೆಯಲು ಸಮಯವಿಲ್ಲ
ಸಂಬಂಧಗಳನ್ನು ಸಂಕೋಲೆ ಎಂದು ದೂರದ ನನಗೆ
ಆ ಸಂಬಂಧಗಳನ್ನು ಉಳಿಸಿಕೊಳ್ಳಲು ಸಮಯವಿಲ್ಲ !

ಪೈಪೋಟಿಯ ಪ್ರಪಂಚದಲ್ಲಿ, ದುಡ್ಡಿಗಾಗಿ ಎಲ್ಲರ ಓಟ
ಓಡಿ ಓಡಿ ಉಸಿರು ನಿಲ್ಲುವಂತಾದರು, ವಿಶ್ರಾಂತಿಗೆ ಸಮಯವಿಲ್ಲ
ಬೇರೆಯವರು ಮಾಡಿದ ಉಪಕಾರಕ್ಕೆ ಪ್ರತ್ಯೋಪಕಾರ ಹಾಗಿರಲಿ
ಇಂದು ನಮಗೆ ಕನಸು ಕಾಣಲಿಕ್ಕೊ ಸಮಯವಿಲ್ಲ !

ನೀನೇ ಹೇಳು ಜೀವನವೇ
ಈ ಜೀವನದಲ್ಲಿ ಮುಂದೆನಾಗುವುದು ಎಂದು
ಪ್ರತಿ ಕ್ಷಣ ಸಾಯುತ್ತಿರುವವರಿಗೆ
ಬದುಕುವದಕ್ಕೊ ಸಮಯವಿಲ್ಲ !

- ಕುಮಾರ ಸಿದ್ದರಾಜ

06 Feb 2017, 08:28 pm
Download App from Playstore: