ಚಂದಿರೆಯೇ ಓ ಸುಂದರಿಯೇ...
ಚಂದಿರೆಯೇ ಓ ಸುಂದರಿಯೇ
ನನ್ನ ಹೃದಯವ ಕಳೆದುಕೊಂಡೇ
ಅದು ಕಳೆದ ಜಾಗ ಅದಾವುದೆಂದು
ನಿನ್ನ ದ್ಯಾನದಿ ಮರೆತು ಬಿಟ್ಟೆ.
ನಿನ್ನ ಕಾಲ್ ಗೆಜ್ಜೆಯಲ್ ಅದು ಕಳೆದಿತೆಂದು
ನಿನ್ನ ಕಾಲಡಿ ಹುಡುಕಿ ಬಂದೆ
ನಿನ್ನ ಹೆಜ್ಜೆಯ ಧೂಳಿನ ಕಣಗಳಲು
ನಿನ್ನೊಲುಮೆಯ ಕಂಡು ನಿಂದೆ.
ಇದು ಮಾಯವೋ, ಇಲ್ಲ ಮರ್ಮವೋ
ಹೇಳೆಲೆ ನನ್ನುಸಿರೇ..
ನೀ ದೊರೆವೆಯ ಇಲ್ಲ ಮರೆವೆಯ
ತಿಳಿಸುತ ಬಿಡಿಸು ಸೆರೆ.. ||
ಚಂದಿರನ ಒಂದಾಗಮನ
ಆ ಕಡಲನು ಕುಣಿಸುವುದು
ಚಂದಿರೆಯೇ ನಿನ್ನೊಂದು ನುಡಿ
ಈ ಮನಸನ್ನು ತಣಿಸುವುದು
ನೀನೊಲಿದು ಜೊತೆ ಸೇರಿದರೆ
ಆ ಬದುಕದು ಸುಂದರವೂ
ಮರೆಯಾಗಿ ನೀನೋಡಿದರೆ
ಈ ಬದುಕೇ ಮರಳ್ಗಾಡು..
ನೀ ಪ್ರೇಮಿಯೋ ಬರಿ ಗೆಳತಿಯೋ
ಹೇಳೆಲೆ ಗಿರಿ ನವಿಲೇ
ಇದು ಸಾಧ್ಯವೋ, ಅಸಾಧ್ಯವೊ
ತಿಳಿಸೆಲೆ ನನ್ನೊಲವೇ..
- ಶ್ರೀಗೋ.
07 Feb 2017, 03:55 pm
Download App from Playstore: