ಕಾಣದ ಬದುಕು..

ಕಾಣದ ಬದುಕನು ಬಯಸಿದೆ ಮನ..
ಕಾಣುವೆ ಬದುಕನು ಒಂದು ದಿನ..
ಕಂಡರೂ ಇರಲಾರೆ ನಾ ಅಲ್ಲಿ ಹೆಚ್ಚು ದಿನ..

ಕಾಣದ ಬದುಕಿನ ಸುಂದರ ಕನಸಿನ
ಗೀತೆಯು ಇಂದು ಕೇಳುತಿದೆ....
ತಂಪಾದ ಗಾಳಿಲಿ ಸುಮಧುರ ಹಾಡಿದು
ನನ್ನೆದೆ ಕದವನು ಬಡಿಯುತಿದೆ....
ಎಲ್ಲಿಯದೋ ಕನಸು ಎಲ್ಲಿಯದೋ ಹಾಡು..
ಕಾಣ ಬಲ್ಲೆನೆ ಕಮಾನು....ಒಂದು ದಿನ
ಕೇಳಬಲ್ಲೆನೆ ಗೀತೆಯನು....

ಸಾವಿರ ಕನಸದೂ ಬದುಕಲಿ ಬಂದರೂ
ಒಂದೇ ಜೀವನವಿದೆಯಂತೆ..
ಬಣ್ಣದ ಲೋಕದಿ ಸುಳ್ಳಿನ ಜಾಲದ
ನರಳುವ ಜೀವಿಯು ನಾನಂತೆ....
ಕಣ್ಣೀರಂತೆ.....ಬರಿ ನೋವಂತೆ....
ಕಾಣ ಬಲ್ಲೆನೆ ನಗುವನು....
ಅದರೊಳು ಮರೆಯ ಬಲ್ಲೆನೆ ನೋವನು....

ಬಿಸಿಲ ತಾಪದಲಿ ಬೆಂಕಿ ಜ್ವಾಲೆಯಲಿ
ಬೆಂದಿರುವ ಹೂವು ನಾನು....
ಎಂದಿಗಾದರೂ..
ಮುಗಿಲ ನೋಡುತ ಅರಳಬಲ್ಲೆನೇನು....
ಅರಳಬಹುದೇ ನಾನು..
ಬದುಕಲಿ ಖುಷಿಯಿಂದ ಬಾಳಬಹುದೇ ನಾನು
ಬಾಳಬಹುದೇ ನಾನು..

- B.Shree

09 Feb 2017, 06:09 am
Download App from Playstore: