ಕೋಗಿಲೆ
ಕಾಗೆ ಗೂಡಿಗೆ ಹೋಗಿ
ಕೋಗಿಲೆಯು ಮೊಟ್ಟೆ
ಇಡುವ ಈ ಸೃಷ್ಟಿ
ಕಾಯಕದ ಅರ್ಥ ಏನು!!
ತನ್ನ ಕಂದನ ಸಲಹೋ
ಬಯಕೆಯು ಅದಕಿಲ್ಲ
ಕರುಳ ಕುಡಿ ಎಂಬ
ವ್ಯಾಮೋಹ ಅದಕಿಲ್ಲ!!
ಕಾಗೆ ಗೂಡನು ಅರಸಿ
ಕಪಟದಲಿ ಹೋಗಿ
ಮೊಟ್ಟೆ ಇಡುವ ನಿನ್ನ
ಬಯಕೆ ಎಷ್ಟು ಸರಿಯೇ!!
ತಾಯಿ ಕಾಗೆಯ ಮಡಿಲ
ಕೂಸಾಗಿ ಬೆಳೆದರೂ
ಗುಟುಕಿನ ಪ್ರೀತಿಯ
ತಾ ಮರೆತು ಸಾಗುವದು!!
ಅಭಿಮಾನವೂ ಇಲ್ಲ
ಕೃತಜ್ಞತೆಯು ಇಲ್ಲ
ತಾಯಿ ಎಂಬ ಪ್ರೀತಿಯು
ಕೋಗಿಲೆಗೆ ಇಲ್ಲ!!
ತನ್ನ ಬದುಕಿನ ಸೆಲೆಯ
ಹಾಡಿ ಹೇಳುವ ಕಲೆಯ
ಕಲಿತಿರುವ ಕೋಗಿಲೆಗೆ
ಇದೆಂತ ಶಾಪ!!
ಹರೆಯದ ಪ್ರಣಯದಲಿ
ಫಲಿಸಿದ ವರವನ್ನು ಇಡಲು
ಮತ್ತೆ ಮರಳುವುದು
ಅರಸಿ ಕಾಗೆ ಗೂಡ!!
- ಪಿ.ಜಿ.ಜ್ಯೋತಿ
09 Feb 2017, 09:26 am
Download App from Playstore: