ಗೊಡ್ಡು ಆದರ್ಶ

ಎಲ್ಲರ ಎದೆಯಾಳಕ್ಕೆ
ಗರಡಿ ಹಾಕಿ ಎಳೆದು ಹುಡುಕಿದರೂ ಸಿಗಲಿಲ್ಲ
ಕರುಣೆ, ಅನುಕಂಪ,
ಹಾಳು ಆದರ್ಶಗಳ ತಗಡು ತತ್ವಗಳು

ಕನ್ನಡಿ ಮುಂದೆ ಪೋಜು ಕೊಟ್ಟು
ಕಕ್ಕಲುತನವನ್ನೆಲ್ಲ ಕಾರಿಕೊಂಡು
ಎದೆ ಎದೆ ಬಡಿದುಕೊಂಡು
ಊರಿಗೆಲ್ಲ ನಾನೇ ಗರತಿ ಗಂಗವ್ವನೆಂದರು

ನಾಳೆಗಳನ್ನೆಲ್ಲ ಒಲೆಯೊಳಗೆ ಮಡಚಿಟ್ಟು ಕೊಳ್ಳಿಇಟ್ಟು,
ಕಾ ಕಾ ಎಂದು ಬಂದ ಕಾಗೆಗಳಿಗೆಲ್ಲ ಬಾಡುಟಿಟ್ಟು,
ಉಸಿರುಗಳಿಗೆಲ್ಲ ಉರಿಇಟ್ಟರು

ಬೋರಲು ಬಿದ್ದು ಹಾಳು ತತ್ವಗಳು
ಗಂಟಲು ಹರೆದುಕೊಂಡು ಚೀರಿದ ನ್ಯಾಯನೀತಿಗಳು
ಬಿಕ್ಕಿ ಬಿಕ್ಕಿ ಬಿಕ್ಕಳಸಿ ಎದೆ ಬಿರಿದು
ಚೀರಿ ಚೀರಿ ಚಿಪ್ಪಾಡಿಯಾದ ಹರಕು ಮುರಕು ಬದುಕಗಳು

ರಚನೆ: ರೇವಣಸಿದ್ದ ಗೌಡರ

- Revanasidda Goudar

09 Feb 2017, 02:51 pm
Download App from Playstore: