ಏಕೆ? ಹೀಗೇಕೆ?
ಕೊಳಲೂದಿದಾಗ ಬಾರದ ಸದ್ದು
ಕೊಳಲು ಮುರಿದಾಗ ಬಂದೀತೇಕೆ
ಬಿರು ಬಿಸಿಲಲಿ ಬಾರದ ಮಳೆ
ಕೆರೆ ಕಟ್ಟೆ ಒಡೆದಾಗ ಬಂದೀತೇಕೆ
ಹೂ ಅರಳಿದಾಗ ಬಾರದ ಸುಗಂಧ
ಹೂ ಬಾಡಿದಾಗ ಬಂದೀತೇಕೆ
ಅಲೆಗೆ ಅಳಿಸಿ ಹೋಗದ ನಿನ್ನೆಸರು
ಸಮುದ್ರ ಒಣಗಿದಾಗ ಅಳಿಸೀತೇಕೆ
ಕೋಗಿಲೆ ಹಾಡಿದಾಗ ಬಾರದ ಸ್ವರ
ಕೋಗಿಲೆ ಅತ್ತಾಗ ಬಂದೀತೇಕೆ
ಕಡಲ ಸುಳಿಗೆ ಸಿಲುಕದ ಮೀನು
ಅಲೆಗೆ ಸಿಲುಕಿ ಸತ್ತೀತೇಕೆ
ಹಸಿರಲ್ಲಿ ಅರಳದ ಕಮಲ
ಕೆಸರಲ್ಲಿ ಅರಳುವುದೇಕೆ
ಕಣ್ತುಂಬಿದಾಗ ಬಾರದ ಕಣ್ಣೀರು
ಎದೆ ತುಂಬಿದಾಗ ಬಂದೀತೇಕೆ
ಬೆಳಕಲಿ ಹುಡುಕಿದರೂ ಕಾಣದ ನಕ್ಷತ್ರ
ಕತ್ತಲು ಕವಿಯುತ್ತಿದ್ದಂತೆ ಮಿನುಗಿ ಮರೆಯಾಯಿತೇಕೆ
ಅಮಾವಾಸ್ಯೆಯಲಿ ಬಾರದ ಚಂದ್ರ
ಬೆಳದಿಂಗಳಲೂ ಕಾಣದಾದ ಹೀಗೇಕೆ
- ಅಕವಿ
09 Feb 2017, 09:49 pm
Download App from Playstore: