ನನ್ನೊಲವೆ ಎಲ್ಲಿರುವೆ...?

ಓ ಒಲವೆ ..ಎಲ್ಲಿರುವೆ
ನೀ ಬರದೆ .. ನೊಂದಿರುವೆ

ಈ ಮನಸ್ಸಿನಾಗೆ ನೀನು ಕವಿತೆಗಾರನು..
ಪ್ರೀತಿಯ ಕಾವ್ಯ ಬರೆದೋದೆ ..
ಈ ಹೃದಯದಲ್ಲಿ ನೀನು ಚಂದಮಾಮನು..
ಬೆಳದಿಂಗಳ ಚೆಲ್ಲಿ ಎಲ್ಲೋದೆ..
ಜೋಡಿ ಹಕ್ಕಿ ನಾವು ಎಲ್ಲಿ ಹೋದೆ ನೀನು..
ಇನ್ನೊಮ್ಮೆ ಜೊತೆಯಾಗುವ ಬಾರಾ..

ಮೌನವಾಗಿಯೇ ನನ್ನ ಮನಸ್ಸು ಸೇರಿದೆ..
ಪ್ರೀತಿ ಮಾತಲ್ಲೆ ನನ್ನ ಹೃದಯ ಕದ್ದಿದೆ ..
ಮೌನಾನೆ ನಾನಾದೆ ಪ್ರೀತಿನೆ ನೀನಾದೆ..
ಆ ಪ್ರೀತಿ ನೀಡದೆ ನೀನೀಗ ಎಲ್ಲೋದೆ ..
ಒಲವಿಂದ ಒಲವನು ಸೇರಲು ಬಾ..
ನನ್ನೊಲವೆ ದೂರಾಗದೆ ಬೇಗನೆ ಬಾ..

- B.Shree

10 Feb 2017, 06:53 am
Download App from Playstore: