ಗೆಳತಿ ಕೊಡುವೆಯಾ ಅನುಮತಿ

ನಿನ್ನ ನಗುವ ತುಟಿಗಳ ತೊಟ್ಟಿಲಲ್ಲಿ
ನಾ ಮಗುವಾಗ ಬಯಸುವೆ.

ನಿನ್ನ ಮಂದಾರ ಚೆಲ್ಲುವ ಮೊಗದ ಹೂವಲ್ಲಿ
ಮಕರಂದ ಹೀರುವ ದುಂಭಿಯಾಗ ಬಯಸುವೆ.

ನಿನ್ನ ಕಣ್ಣ ಕಡಲ ಕಿನಾರೆಯಲ್ಲಿ
ಸದಾ ಏರಿಳಿಯುವ ಅಲೆಗಳಾಗ ಬಯಸುವೆ.

ನಿನ್ನ ಮನಸಿನ ಮೇರು ಪರ್ವತದಲ್ಲಿ
ಅಡಿಯಿಂದ ಮುಡಿವರೆಗೆ ಆವರಿಸಿರುವ ಹಿಮವಾಗ ಬಯಸುವೆ.

ನಿನ್ನ ಬಾಳ ಸಮುದ್ರದಲ್ಲಿ
ದಡ ಸೇರಿಸುವ ದೋಣಿ ನಾನಾಗ ಬಯಸುವೆ.

ಇವೆಲ್ಲಕ್ಕೂ ನೀ ನೀಡುವುದಾದರೆ ಅನುಮತಿ
ಚಿರಸ್ಥಾಯಿಗೆ ಸೇರುವುದು ನನ್ನ ಪ್ರೀತಿ.

- ಅಕವಿ

10 Feb 2017, 02:12 pm
Download App from Playstore: