... ಬಾ ಬೆಳಗೆ ಬೇಗ ಬೆಳಗು...
ಬಾ ಬೆಳಗೆ ಬೇಗ ಬೆಳಗು...
ನಿನಗಾಗಿ ಕಾದಿರುವ ಇಬ್ಬನಿಯ ಚುಂಬಿಸು
ಬಣ್ಣದ ಕಿರಣಗಳ ಪ್ರತಿಫಲಿಸು....
ಹಸಿರೆಲೆಯ ಮರವ ಚುಂಬಿಸು
ಅದರೆತ್ತರ ಇನ್ನಷ್ಟು ಎತ್ತರಿಸು...
ಬಾ ಬೆಳಗೆ ಬೇಗ ಬೆಳಗು...
ಕತ್ತಲೆಯ ಕಾಣದೆ ಕಣ್ಣು ಮುಚ್ಚಿರುವ
ಜೀವಕುಲ ಕೋಟಿ ಚುಂಬಿಸು...
ಹೊಸದಾರಿ ತೊರಿಸು...
ಬಾ ಬೆಳಗೆ ಬೇಗ ಬೆಳಗು....
ಭೂ ಒಡಲ ಚುಂಬಿಸು
ಸಾಗರದಲೆಯ ಚುಂಬಿಸು
ಯನ್ನ ಹೃದಯ ಚುಂಬಿಸು
ಕವಿ ಜೋಳಿಗೆ ತುಂಬಿಸು....
ಬಾ ಬೆಳಗೆ ಬೇಗ ಬೆಳಗು....
ಪಿ ಅನಿ
11-2-17
- ಪಿ ಅನಿ...
11 Feb 2017, 07:05 am
Download App from Playstore: