ನೀ ಬರುವ ದಾರಿಯಿಲಿ......ನಾನ

ದಾರಿ ಹುಡುಕ ಹೊರಟ್ಟಿದವನಿಗೆ ಸಿಕ್ಕಿದ್ದು...
ಅದೇನೋ ಹೊಸದಲ್ಲ ಆದರೂ...
ಮೋಡ ಮುಸುಕಿತ್ತು,ಸುತ್ತೆಲ್ಲಾ ಮಂಜು ಬೇರೆ..
ಆಯಾಸವಾದರೂ ಸಾಗುವುದು ನಿಂತಿಲ್ಲ..
ಮುಂದಕ್ಕೆ ಹೋದಷ್ಟು ಮತ್ತಷ್ಟು ದೂರ ಅನ್ನುವಷ್ಟಿತ್ತು ದಾರಿ..
ಛಲವಿತ್ತು ಜೊತೆಗೊಂದಿಷ್ಟು ಕನಸು..
ಹೊಟ್ಟೆ ಹಸಿವನಾದರೂ ತಡೆದೇನು ಆದರೆ
ಪ್ರೀತಿಯಲ್ಲಿ ಸೋತ ಹೃದಯದ ಹಸಿವನ್ನು ನಾ ಹೇಗೆ ಇಂಗಿಸಲಿ....
ಅವಳಿಗಾಗಿ ಹಂಬಲಿಸುತ್ತಿದ್ದ ಮನವನ್ನ ಹೇಗೆ ನೋಯಿಸಲಿ...
ಹೋದವಳು ಅವಳು ಕಾಯುತ್ತಿರುವವನು ನಾನು...

- ನಮಿತ ಗಟ್ಟಿ

11 Feb 2017, 11:54 am
Download App from Playstore: