ಹೇಳದ ಕವನ.....ಹೇಳಲಾಗದ ಕವನ

ಒಂಟಿ ಮರದ ಮೇಲೆ ಜಂಟಿಯಾಗಿ ಮೂಡಿ ಬಂದ ಅವಳ ಹೆಸರು ಕೆತ್ತನೆ ಹೇಳದ ಕವನ.....
ಬಂಡೆ ಗಲ್ಲ ತಾಳ್ಮೆ ಮುರಿದು ಕೇತ್ತಿಸಿಕೊಂಡ ಅವಳ ಹೆಸರು ಹೇಳದ ಕವನ......
ನಿನ್ನ ಮರೆತು ಬೇರೆ ಏನನ್ನು ಯೋಚಿಸದೆ ನರಳಾಟವೆ ಹೇಳದ ಕವನ .........
ಪ್ರೆಯಸಿಯ ಹೆಸರು ಸುವರ್ಣಾಕ್ಷರ ಹಚ್ಚೆಯ ರೂಪದಲ್ಲಿ ಹಾಕಿಸಿದ ನೋವು ಹೇಳದ ಕವನ......
ಬಸ್ಸಿನ ಸೀಟಿಗೆ ಗೊತ್ತಾಗಿ ಅವಳಿಗೆ ತಿಳಿಯದೆ ಹೋದ ಆ ಅಕ್ಷರ ಹೇಳದ ಕವನ......
ಸಾವಿರ ರೂಪಾಯಿ ನೋಟಿನ ಮೇಲೆ ಬರೆದ ಬೆಲೆ ಕಟ್ಟಲಾಗದ ಪ್ರೀತಿಯ ಮಾತು ಹೇಳದ ಕವನ ......


ಇದು ಹೇಳದ ಕವನ...ಹೇಳಲಾಗದ ಕವನ..ಹೇಳಲಾಗದ ಕವನ.......

- Shiva.S.M...!

12 Feb 2017, 07:18 am
Download App from Playstore: