ಯಾರು ನನ್ನವರಲ್ಲಾ..?
ಯಾರನ್ನೆಲ್ಲಾ ನನ್ನವರೆಂದುಕೊಂಡೆನೊ
ಅವರ ಯಾರೂ ನನ್ನವರಲ್ಲಾ..
ನೀರಿನಲ್ಲಿ ಕಾಣೊ ನನ್ನ ಪ್ರತಿಬಿಂಬದ ಹೊರತಾಗಿ
ಬೆನ್ನಹಿಂದೆ ಬರೊ ನನ್ನ ನೆರಳಿನ ಹೊರತಾಗಿ
ಮನಸ್ಸಿನಲ್ಲಿರೊ ನನ್ನ ಭಾವನೆಗಳ ಹೊರತಾಗಿ
ಹೃದಯಲ್ಲಿರೊ ನನ್ನ ಪ್ರೀತಿಯ ಹೊರತಾಗಿ
ಈ ಬದುಕನ್ನು ಜಯಸಬಲ್ಲೆ ಎಂಬ ನನ್ನ ಆತ್ಮವಿಶ್ವಾಸದ ಹೊರತಾಗಿ..
ನನ್ನೊಳಗಿರೊ ಆತ್ಮದ ಹೊರತಾಗಿ..
ಈ ಜಗತ್ತಿನಲ್ಲಿ ಯಾರು ನನ್ನವರಲ್ಲಾ....
ಇವರೆ ನನಗೆಲ್ಲಾ..
ಯಾರನ್ನೆಲ್ಲಾ ನನ್ನವರೆಂದುಕೊಂಡೆನೊ
ಅವರ ಯಾರೂ ನನ್ನವರಲ್ಲಾ..
- B.Shree
12 Feb 2017, 08:22 am
Download App from Playstore: