ಇದು ಹೃದಯವಲ್ಲ ಎರಡು ಸಾವಿರದ
ನನ್ನ ಹೃದಯವಾಗಿದೆ ಈಗ
ಹೊಸ ಎರಡು ಸಾವಿರದ ನೋಟು.
ಪ್ರೀತಿಯ ಲೇಖನಿ ಹಿಡಿದು ಅದರಲ್ಲಿ
ನಾ ನಿನ್ನ ಹೆಸರನ್ನು ಗೀಚಿಬಿಟ್ಟು.
ಈಗದು ಚಲಾವಣೆ ಆಗೋದೆ
ನನಗೆ ಮಹಾ ಡೌಟು.
ಎಲ್ಲಿಯೇ ನಾ ಅದ ಕೊಡಲು ಹೋದರೂ
ನಿನ್ನೆಡೆಗೆ ತೋರುತಿರುವರು ಅವರ ಬೆಟ್ಟು.
ನನಗೀಗ ತಿಳಿದುಹೋಯ್ತು ಯಾರೂ
ತೆಗೆದುಕೊಳ್ಳುವುದಿಲ್ಲ ಅದನ್ನು ನಿನ್ನ ಬಿಟ್ಟು.
ನೀನೆ ಸ್ವೀಕರಿಸಿ ಸಹಕರಿಸು
ಹೃದಯದ ನೋಟನು ದಯವಿಟ್ಟು.
ತಿರಸ್ಕರಿಸುವುದಾದರೆ ಹೊರಟುಬಿಡು ನೀ
ನನ್ನ ಕಣ್ಮುಂದೆಯೇ ಅದನ್ನು ಜೀವಂತ ಸುಟ್ಟು.
- ಅಕವಿ
12 Feb 2017, 08:39 pm
Download App from Playstore: