ನಿನ್ನ ನೆನಪು

ಕೋಲ್ ಮಿಂಚು ಬಳಿ ಬಂದು
ಬಯಸಿತು ನನ್ನಯ ಸಲಿಗೆ!!
ಮಿನುಗಿ ಮರೆಯಾದ
ಆ ತಾರೆಗೆ ನಿನ್ನಯ ಹೋಲಿಕೆ!!

ಬಿಡದಿರುವ ಈ ಮೌನ ಗದ್ಗದಿಸಿ
ಕುಳಿತಿದೇ ನನ್ನಯ ಕೊರಳಲಿ!!
ಆಕಾಶ ಗಂಗೆ ಉಕ್ಕಿ ತಾ ಬಂದು
ಹರಿದಿದೆ ನನ್ನ ಈ ಕಣ್ಣಲಿ!!

ಇರುಳ ತಾ ಕಳೆಯ ಬರುವ
ರವಿಗಾಗಿ ಕಾದಿದೆ ಕಂಗಳು!!
ನೋವ ತಂದೆರೆದು ಹೊರಟ ನಿನ್ನ
ಒಲವ ಬಯಕೆ ಈ ಮನದೊಳು!!

ವಿರಹದ ಕಿಡಿಯು ಉರಿದು
ಧಗಧಗಿಸಿ ಸುಡುತಿದೆ ನನ್ನನು!!
ಚಲಿಸುವ ಮೋಡ ಕರಗಿ ಮಳೆಯಾಗಿ
ತೊಳೆಯಲೀ ನೆನಪ ಕೊಳೆಯನು!!

- ಪಿ.ಜಿ.ಜ್ಯೋತಿ

13 Feb 2017, 09:42 am
Download App from Playstore: