ಮಧುರ ಮುಂಜಾನೆ

ತಣ್ಣನೆಯ ಗಾಳಿಯ
ಸ್ಪರ್ಶ ಪಡೆದ ಗಿಡದ ಮೊಗ್ಗು
ಹೂವಾಗಿ ಅರಳುವುದು.
ಪ್ರತಿ ಮುಂಜಾನೆಗೆ.

ಹೂ ಕಂಪಿಗೆಎದ್ದ
ದುಂಬಿ ಪಾತರಗಿತ್ತಿಹಾಡಿ
ಮಕರಂದ ಸವಿಯುವುದು.
ಪ್ರತಿ ಮುಂಜಾನೆಗೆ.

ಈ ಲೋಕದ ಒಡೆಯ
ಕೆಂಪು ವಸ್ತ್ರದಲಿ
ದುಟಿಗೆ ಹಾಜರು..
ಪ್ರತಿ ಮುಂಜಾನೆಗೆ.

ವಿಸ್ಮಯ ಲೋಕಗಳ
ಮುಕ್ತಾಯದ ಪಯಣಕ್ಕೆ
ನನ್ನ ವಾಸ್ತವದ ಎಚ್ಚರ!!
ಪ್ರತಿ ಮುಂಜಾನೆಗೆ.
***
•~> ಜಿ. ಕರಣ್

- ಕರಣ್ ಗಾವಡಾ

13 Feb 2017, 10:38 am
Download App from Playstore: