ಶೂನ್ಯ
ಕಾಣದ ಮುಖಕೆ ನೀ ಕನ್ನಡಿ ಹಿಡಿದರೆ
ಎಲ್ಲವೂ ಶೂನ್ಯ ವೇ ಅರಿಯದೇ ನಿನಗೆ!!
ಕಣ್ಣನು ಮುಚ್ಚಿ ಬೆಳಕಲಿ ನಿಂತರೆ
ಕಾಣುವುದೇನಿದೆ ಎಲ್ಲವೂ ಇರುಳೇ!!
ಭರವಸೆ ಇಲ್ಲದೇ ಬದುಕಲಿ ನಡೆದರೆ
ನಾಳಿನ ಬದುಕಿಗೆ ಅರ್ಥವು ಎಲ್ಲಿದೆ!!
ಬೀಸುವ ಗಾಳಿಯ ಕೈ ಮುಷ್ಟಿಯಲ್ಲಿ
ಹಿಡಿದು ಬಚ್ಚಿಡಲು ನಿನಗೆ ಸಾಧ್ಯವೇ!!
ಮತಿ ಭ್ರಮಣೆಯಿಂದ ಮಂತ್ರವ ನುಡಿದರೆ
ನಿನ್ನನು ತಲುಪದೇ ದೇವರ ತಲುಪುದೇ!!
ಮಾಡುವ ಕಾರ್ಯದಿ ಶ್ರದ್ದೆಯು ಇರದೇ
ಬಯಸಿದ ಫಲವು ನಿನಗದು ದೊರೆವುದೇ!!
- ಪಿ.ಜಿ.ಜ್ಯೋತಿ
13 Feb 2017, 11:46 am
Download App from Playstore: