ಮನಸೆಂಬ ಮರ್ಕಟ

ಕನಸೆಂಬ ಕಾನನದಿ ಮನಸೆಂಬ ಮರ್ಕಟವು
ಅತ್ತಿಂದಿತ್ತ ಇತ್ತಿಂದತ್ತ ಹಾರುತ್ತಿತ್ತು

ಏನು ಆತುರವೋ ಏನು ಕಾತುರವೋ ಅದಕೆ ಜಗವ ಬೊಗಸೆ ಹೃದಯದಿ ತುಂಬಿಕೊಂಡು ನಲಿಯುತ್ತಿತ್ತು ನರಳುತ್ತಿತ್ತು

ಎಷ್ಟಿದ್ದರೂ ಎಲ್ಲವನು ಮರೆತು ಇರದುದರ ಹಿಂದೆ ಓಡುವುದು ,ಸಿಕ್ಕಾಗ ಬೆಲೆಕೋಡದೆ ಕಳೆದುಕೊಂಡು ಕೋರಗುವುದು

ಮನಸೇ ನೀನೋಂದು ಮಾಯೆ
ಮಿಂಚಿನ ವೇಗ ನಿನ್ನದು ಸರಿಯೇ?
ಆದರೂ ನಿನ್ನ ಹೃದಯದ ನೋವ ನೀನೇ ತಿಳಿಯೆ!

ನೀನೋಂದು ಮೋಹಕ ಶಕ್ತಿ
ಹಿಡಿತದಲಿದ್ದರೆ ಪರಮಾಣು ಶಕ್ತಿ
ಹಿಡಿತ ಬಿಟ್ಟರೆ ದುಶ್ಟ ಶಕ್ತಿ

ನಿನ್ನ ಲೀಲೆಯ ನೀನೇ ಅರಿಯೆ
ನಿನಗೆ ಸೋತವನಾಗುವ ಭಿಕಾರಿಯೇ
ನಿನ್ನ ಗೆದ್ದವನಿಗೆ ನೀನೇ ಅಚ್ಚುಮೆಚ್ಚಿನ ಪ್ರಿಯೆ
ಹಂಸಿನಿ
೧೩/೨/೨೦೧೭

- ವಿಸ್ಮಯ

13 Feb 2017, 04:37 pm
Download App from Playstore: