ಆತ್ಮ ದೇವ
ಆತ್ಮವೆಂಬ ದೇವರಿಗೆ
ದೇಹವೆಂಬ ದೇಗುಲವು!!
ನಿತ್ಯ ಯೋಗದ ಪೂಜೆಗೈಯಲು
ದೇಹ ದೇಗುಲ ಪುನೀತವು!!
ಧ್ಯಾನದ ನೈವೇದ್ಯದ ಅರ್ಪಣೆ
ಆತ್ಮ ದೇವಗೆ ನಿತ್ಯವೂ!!
ಒಳ್ಳೆಯ ಆಲೋಚನಾ ಭಾವವೇ
ಆತ್ಮ ದೇವನ ಅಲಂಕಾರವು!!
ಮಾಡುವ ದಾನ ಧರ್ಮವೇ
ಆತ್ಮ ದೇವನಿಗೆ ಪ್ರಿಯವು!!
ಸತ್ಯ ಮಾರ್ಗದಿ ನಡೆದುಕೊಂಡರೆ
ಆತ್ಮ ದೇವ ಸಂತೃಪ್ತನು!!
- ಪಿ.ಜಿ.ಜ್ಯೋತಿ
13 Feb 2017, 04:39 pm
Download App from Playstore: