ಜೋಪಡಿ ಫಕೀರನ ನೊಂದ ಮನಸು..
ಅಪರಾತ್ರಿಯ ಕನವರಿಕೆಗಳಲಿ
ಅದುಮಿಡಲಾಗದ ಭಾವನೆಗಳಲಿ
ಅಗಣಿತ ಪ್ರೀತಿಗೆ ಬದಲಾಗಿ
ಅಂತ್ಯ ಕಾಣದ ನೋವ ಹಂಚಿ ಹೋದ
ಅಪರಿಚಿತಳಂತೆ ಹಾದು ಹೋಗುವ ನಿನಗೆ
ಅರ್ಥವಾಗದು ಸಖಿ ನನ್ನಯ ವೇದನೆ....
ಜೊತೆಯಾಗಿ ನೇಯ್ದ ಕನಸುಗಳು
ಜೊತೆಯಾಗಿ ಬದುಕುವ ಭರವಸೆಗಳು
ಜೋಪಡಿ ಫಕೀರನ ದೂರ ತಳ್ಳಿದ ನಿನಗೆ
ಜೋಡಿಯಾಗಿ ಸಾಗಿದ ಹಾದಿ ನೆನಪಿರದು...
ಮರೆತು ಬದುಕುವ ಕಲೆ ಹೇಗೆಂದು
ಮಗದೊಮ್ಮೆ ಬಂದು ಕಲಿಸಿ ಕೊಡುವೆಯ
ಮುರಿದ ಮನಸ್ಸಿನ ಮೂಕ ರೋದನೆಗಳು
ಮರೆಯದ ನೆನಪೊಂದ ಮೊಗೆದು ಕೊಟ್ಟ
ಮನಸನ್ನು ಕೊಂದ ನಿನ್ನ
ಮನಸಿಗೆ ಅರ್ಥವಾಗದು ಬಿಡು..
ಬೆಳಕಾಗಿ ಬರುವಳೆಂದು ನಂಬಿದ ನನ್ನನ್ನು
ಬೆರಳ ತುದಿ ಕೊಡವಿ ನಡೆದೆ ಮಗುವಂತೆ
ಬೆನ್ನು ತಿರುಗಿಸಿ ಬಿರುಸಾಗಿ ನಡೆದ ನಿನಗೆ
ಬೆಂದು ಹೋಗಿರುವ ಹೃದಯದ ಪಾಡು
ಬರೆದು ತಿಳಿಸುವಷ್ಟು ತೀಕ್ಷ್ಣತೆ ನನ್ನ
ಬರಹಕ್ಕಿಲ್ಲ ಬಿಡು....
- jabbu
13 Feb 2017, 05:39 pm
Download App from Playstore: