ಬ್ರಹ್ಮ ಗಿಚಿದ ಹೆಸರ...
ಸುಮ್ಮ ಸುಮ್ಮನೆ ಹಿಂದೆ ಬರುತ್ತಿಲ್ಲ ನಾ
ಬ್ರಹ್ಮ ಗಿಚಿದ ಹಣೆಯಲ್ಲಿ ನಿನ್ನ ಹೆಸರನ್ನ
ನಿನ್ನ ನೋಡಲೇ ಬಾರದೆಂದು ಹೊರಟೆ ನಾ
ಕಣ್ಣು ಹಾಯುವವರೆಗೂ ಕಂಡೆ ನಿನ್ನ ನಾ. /
ಪ್ರೀತಿ ಪ್ರೇಮದ ವಿಷಯ ಅರಿಯೆನು
ನಿನ್ನ ಕಂಡಾಗಿನಿಂದ, ನನ್ನನ್ನೇ ಮರೆತೇ ನಾ
ಹುಡುಕುತಿದೆ ಮನಸು ಎಲ್ಲಡೆ ನಿನ್ನ
ಮಾತು ಕೇಳದ ಮನಸು ಕೂಗುತಿದೆ ನಿನ್ನ /
ಪ್ರೀತಿಸಿ, ಅಳಿಸುವ ಜಾಯಮಾನ ನನ್ನದಲ್ಲ
ನಗುವ ಚೆಲ್ಲು ಒಮ್ಮೆ, ಹೃದಯ ಕಳಚಿ ಕೊಡುವೆನಾ
ನಿನ್ನ ನೋಯಿಸುವ ಅಸೆ ಕಿಂಚಿತ್ತು ನನಗಿಲ್ಲ
ನೀ ಇಲ್ಲದ ಜಗದಲಿ ಬದುಕುವ ಅಸೆ ನನಗಿಲ್ಲ/
ಪ್ರೀತಿಯ ಕಿಚ್ಚು ಎದೆಯೂಳಗೆ, ಹುಚ್ಚು ಮನದೊಳಗೆ
ನೀ ಹೀಗೆ ಕಾಡುತ ಕಾಯಿಸುವೆ ಎಲ್ಲಿಯವರೆಗೆ
ಬ್ರಹ್ಮ ಬರೆದಿರುವ ನನ್ನ ಹೆಸರ ನಿನ್ನೊಳಗೆ
ಕಾಯುವೆ ನಿನಗಾಗಿ, ನೀ ಬರುವೆ ಕುಣಿಯುತ ನನ್ನ ಮನೆಗೆ. /
- ಕುಮಾರ ಸಿದ್ದರಾಜ
15 Feb 2017, 08:53 pm
Download App from Playstore: