ಪ್ರೀತಿ ಬದುಕು

ಬದುಕಿನ ಕಡಲಲಿ
ಪುಟ್ಟ ಮನಸಿನ ದೋಣಿ!!
ದೋಣಿಯ ಮೇಲೇರಿ
ಕುಳಿತಿರುವಳು ರಾಣಿ!!

ಸಣ್ಣ ಸಣ್ಣ ವಿಷಯಕ್ಕೂ
ಹುಸಿ ಮುನಿಸು!!
ಅಕ್ಕರೆಯ ಪ್ರೀತಿಗೆ ಅದು
ಮಗು ಮನಸು!!

ನಕ್ಕರೆ ಉದುರುವ
ಮುತ್ತುಗಳ ಸೊಗಸು!!
ಕಪ್ಪೆ ಚಿಪ್ಪಿನಲ್ಲಿ
ಅಡಗಿಸಿ ಇರಿಸು!!

ಅಲೆಗಳ ಸೆಳೆತಕೆ
ಅಲುಗಾಡುವ ದೋಣಿ!!
ಹೆದರದೇ ಕುಳಿತಿರು
ನನ್ನ ಮನಸಿನ ರಾಣಿ!!

ಈ ಬದುಕ ಕಡಲಿನ ತುಂಬ
ಕಾಣುತಲಿ ನಿನ್ನ ಬಿಂಬ!!
ಹಾಲು ನೊರೆಯ ಸುರಿದ
ಚಂದ್ರ ಈ ಅಲೆಗಳ ತುಂಬ!!

ಸಣ್ಣ ಸಣ್ಣ ಆಸೆಗಳ ತುಣುಕು
ಬಾನೇರಿ ನೋಡುತಿವೆ ಇಣುಕಿ!!
ಕಡಲಲ್ಲಿ ಹೊಳೆಯುತ್ತಲಿ
ಆ ನಕ್ಷತ್ರಗಳ ಬೆಳಕು!!

- ಪಿ.ಜಿ.ಜ್ಯೋತಿ

17 Feb 2017, 08:08 am
Download App from Playstore: