ಹಲ್ಕಾ ಕವನ-1
ಅವಳ ನಡೆದ ದಾರಿಯಲ್ಲೆಲ್ಲ
ಕಾಡ ಹೂ ಬಿರಿಯುತ್ತದೆ
ಆಗೇ ಸುಮ್ಮನೇ ನೋಡಿದಾಗ
ಗೊಂದಲವುಂಟು ಮಾಡುವ ಘಮ
ಮುಂಗುರುಳು ಮುತ್ತಿಟ್ಟ ಎಣ್ಣೆಗೆಂಪು ಕೆನ್ನೆ
ಪ್ರಾರಬ್ಧ ಮಾತುಗಳಿಗೆ ತುಟಿಯಾಗಿದ್ದು ಹುಸಿಮುನಿಸಿನ ಕಾರಣ
ಎದೆ ಗಾಯಕ್ಕೆ ಹಾಸುಬೆನ್ನಿನ ಮುಲಾಮು ಹಚ್ಚಿದ್ದು ಅವಳೇ
ಈಗೀಗ ಕತ್ತಲೆಯ ಒಂಟಿತನ
ದೀರ್ಘ ನಿಟ್ಟುಸಿರು ಮತ್ತು ಅವಳು
ತಿರುಗಿ ನೋಡಿದ್ದು ಕೊನೆಯ ತಿರುವಿನಲ್ಲಿ ಪ್ರಥಮ ಸೋಲು
ಆಮೇಲೆ ಎಲ್ಲವೂ ನಿಗೂಢ ಪಥ
ಕ್ಷಣಕ್ಕೊಮ್ಮೆ ಹಾದಿ ತಪ್ಪಿಸೋ ನೆನಪುಗಳು ಅವಳಷ್ಟೇ ಅಮೂರ್ತ
ಪ್ರತಿ ವಿಷಯಕ್ಕೂ ಮುನ್ನುಡಿ ಕುರುಡು ಬಯಕೆಯ ಆದಿ
ಕಾಲಂದುಗೆಯ ತೊಟ್ಟ ಬಿಂಕ
ವಾರೆ ನೋಟಕ್ಕೆ ಬಿಡಸಲಾಗದ ಅರ್ಥ ಮತ್ತು ಅವಳು..
ಅವಿಜ್ಞಾನಿ
- ಅವಿಜ್ಞಾನಿ
20 Feb 2017, 06:46 pm
Download App from Playstore: