ಬತ್ತಿ ಉಳಿದ ಸಾಲುಗಳು

ಒಂಟಿ ಶವದ ವಾಸನೆಯು
ಹರಿದ ಮೂಗಿಗೆ ಬಡಿಯುತ್ತಿಲ್ಲ....!
ಕೀವು ಸುರಿವ ಹುಣ್ಣೊಂದು
ಕಟ್ಟು ಬಿಚ್ಚಿಡು ಎನ್ನುತಿದೆ...!!!!
ಶೋಕಾಚಾರಣೆಯ ಮಡುವಿನಲ್ಲಿ ಕಾಲು ಮುರಿದ ರಾಗವೊಂದು ಶೃತಿಯ ತಪಾಸನೆ ಮಾಡುತಿದೆ....!!!

ಬೆಂದ ಬೂದಿಯಲ್ಲಿ ಬಂಜೆಯಾದ ಬಯಕೆಗೊಂದು ಶ್ರಾದ್ಧ ನಡೆಯುತ್ತಿದೆ..!!!
ಬಳ್ಳಿ ಕಡಿದು ಬೀಳಲು ಮೊಗ್ಗೊಂದು ಬಯಸುತಿದೆ...!!
ಬಳಲಿಹೋದ ಎಸಲು ಕೂಡ ಮತಿಭ್ರಮಣೆಯಾಗುವಂತೆ ಬೇರು ಹಿಡಿದು ಅಲುಗಾಡಿಸುತ್ತದೆ...!!!

ಹಸಿದ ಹಲ್ಲುಗಳು ಕೊಳೆತು ನಾರುವಾಗ ಮುಸಿನಗುವ ಒಸಡಿಗೆ ಮುಂಜಿ ನಡೆಯುತಿದೆ....!!
ಉಚ್ಚೆ ಬರದೆ ಶ್ವಾಸವು ರಟ್ಟೆ ಕಚ್ಚುವಾಗ ಹೆಪ್ಪು ಗಟ್ಟಿದ ರಕ್ತಕ್ಕೆ ಜೋಗುಳ ಹಾಡುತ್ತಾರೆ....!!

ಬಿಸಿಲ ಬೆವರು ಬೆಂದು
ಬೇಯುವಾಗ ಮುರಿದ ಬೆನ್ನಿನ ಬಾಸುಂಡೆ ಲೆಕ್ಕವಾಗುತ್ತದೆ...!!
ಹೊಡೆದ ತಮಟೆ ಮೌನ ಹಾಡಿಗೆ ತಾಳವಾಗುವಾಗ ಬೊಬ್ಬಿಡುವ ಬಾಯಿಗೆಲ್ಲ ಬಂದೋಬಸ್ತ್ ಮಾಡಲಾಗುತ್ತದೆ...!!!!


(ಅವಿಜ್ಞಾನಿ)

- ಅವಿಜ್ಞಾನಿ

20 Feb 2017, 06:48 pm
Download App from Playstore: