ಹಲ್ಕಾ ಕವನ-2
ಅದೇ ದಾರಿಯಲ್ಲಿ ನಾನು ನಡೆಯುವಾಗ ಗೆಜ್ಜೆ ಸದ್ದೊಂದು ಹೇಳಕೇಳದೇ ಕಿಂಕಿಣಿಸಿ ಮರೆಯಾಗುತ್ತದೆ
ಪ್ರೇಮಿಗಳ ದಿನದ ಉಲ್ಲಾಸವಿರಬಹುದೆಂಬ ಸಂಶಯ ಮೂಡುತ್ತೆ ಆಗ..
ಖಾಲಿ ಬಿಂದಿಗೆ ಸೊಂಟದಲ್ಲಿ ನಾಟ್ಯವಾಡುತ್ತಾ ಮುಂದೆ ಸಾಗುತ್ತಿರುತ್ತದೆ ಹದಿನಾಲ್ಕರ ಚಂದ್ರನ ಬಿಂಬ ಮೂಡುವಂತಿರುತ್ತದೆ ನಡೆತ
ಗಳಿಗೆಗೊಮ್ಮೆ ನೆನಪು ಮಾಡುವ ನೆಪಕೆ ವಿರಹಿಗಳೆಲ್ಲಾ ಪ್ರೇಮವೆನ್ನುತ್ತಾರೆ
ಜುಮುಕಿಯ ತೂಗಾಟಕ್ಕೆ ಸಿಕ್ಕ ಮುಡಿಗಳನ್ನು ಬೇರ್ಪಡಿಸುವುದು ನನಗಂತೂ ಸುಗ್ಗಿಯ ಕಾಲ
ಕೊನೆ ಬಾರಿ ಕತ್ತು ಉಬ್ಬಿಸಿ ನೋಡುವ ಪ್ರಯತ್ನಕ್ಕೆ ಕೈ ಹಾಕುವಾಗ
ಕೆಂಗುಲಾಬಿಯ ಎಸಳುಗಳಿಂದ ಒಂದ್ಹೆಸರ ಚಿತ್ತಾರ ಹುಟ್ಟು ಪಡೆಯುತ್ತದೆ
ಕೇಳದಿರಿ ಯಾರಾಕೆ ಶೃಂಗಾರಿಯೆಂದು ಇನ್ನೂ ಮಾಸದ ಗಾಯ ಅದು
ನೋಡದಿರಿ ಬಿಂಕಗಳ ಒಟ್ಟಾರೆ ಅರುಣನ ಕೆನ್ನಾಲೆಯ ನೋಟವದು
ಹಲ್ಕಾ ಸಾಲಿಗೆ ಅಕ್ಷರ ಮತ್ತು ಹಲ್ಕಾ ಕವನದ ಹುಮ್ಮಸ್ಸು
ಅವಿಜ್ಞಾನಿ
ಹಲ್ಕಾ ಕವನ
- ಅವಿಜ್ಞಾನಿ
21 Feb 2017, 08:03 am
Download App from Playstore: