"" ಬೆಳಗು ಬೇಕು ""

"" ಬೆಳಗು ಬೇಕು ""

""ಸಾವಿನ. ಹಾದಿಯಲ್ಲಿ
ದೇಶದ ಬೆನ್ನೆಲುಬು
ಭರವಸೆಯ ನೀರಿಕ್ಷೆಯಲ್ಲಿ ಸತ್ತವನ ಕುಟುಂಬವು ""

""ಬಗೆಹರಿಯದ ಬಿಕ್ಕಟ್ಟಿದು ಬವಣೆ ತಪ್ಪಲಿಲ್ಲ ರೈತನದ್ದು ಬೆಳೆದ ಫಸಲಿಗೆ ಉತ್ತಮ ದರವಿಲ್ಲ ರೈತನ ಮಕ್ಕಳು ಕಾಲೇಜು ಹತ್ತಲಿಲ್ಲ""

""ಧನಿಕನ ದರ್ಬಾರಿಗೆ
ಕಂಗಾಲು ರೈತನು
ಮನೆಯ ತುಂಬಾ
ತೇಪೆಯ ಉಡುಗೆಗಳು
ಇದುವೇ ರೈತನ ಪಾಡು
ದುಬಾರಿ ಕಾರಿನ ಪಯಣಿಗನಿಗೆ ಕಾಣದು""

"" ಅಕ್ಕಿ ಕಬ್ಬು ರಾಗಿ ಜೋಳ ಹಸಿವು ನೀಗಿಸುವ ಅಮೃತ ಬೆಳೆದವನಿಗೆ ಸಿಕ್ಕಾಯ್ತು ಅದಕ್ಕೊಡೆಯುವ ವಿಷ ""

""ಗೋಳು ಜೀವನಕ್ಕೆ ಮುಕ್ತಿ ಬೇಕು ಕರುಣೆ ಇರುವ ನೇತಾರ ಬೇಕು
ರೈತನ ಮೊಗದಲ್ಲಿ ನಗುಬೇಕು ದೇಶಕ್ಕೆ ಹಿತಬೇಕು

ಸುಕ

- ಸುಪ್ರೀತ್ ಕ೦ಚಿಬೈಲ್(ಸುಕ)

24 Feb 2017, 09:44 am
Download App from Playstore: