ನಿನೆನಾ ..... ಹೂ ಮನದ ಹುಡುಗ
ಹಿಡಿ ಅಗಲದ ಹೃದಯದ ಮೇಲೆ
ನನ್ನ ಹೆಸರ ಬರೆದು
ಇದರ ಮಿಡಿತ ನೀನು ಎಂದವಳು
ನಿನೆನಾ.... ಹೂ ಮನದ ಹುಡುಗಿ
ನಿನೆನಾ..... ನಿನೆನಾ...
ತಿರವಿಲ್ಲದ ಆ ಬಾನಿನಷ್ಟು
ಅಳವನರಿಯದ ಆ ಸಾಗರದಷ್ಟು
ನಿನ್ನನ್ನು ಪ್ರಿತಿಸುವೆ ಎಂದವಳು
ನಿನೆನಾ... ನಿನೆನಾ...
ಮನಸಿನ ಪುಟಗಳಲಿ
ಪ್ರೀತಿಯ ಪಲ್ಲವಿಯನು
ಬರೆಯುತ ನಲಿದವಳು
ನಿನೆನಾ... ನಿನೆನಾ...
ಕನಸುಗಳ ಸಂಜೆಯಲಿ
ಸೂರ್ಯ ಜಾರುವ ಸಡಗರದಲ್ಲಿ
ಕೈ ಹಿಡಿದು ಕುಣಿದವಳು
ನಿನೆನಾ... ನಿನೆನಾ...
ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ
ತುಟಿಯಂಚಲಿ ನಗುತ್ತ
ಮೈ ಮರೆತು ಕುಳಿತವಳು
ನಿನೆನಾ... ನಿನೆನಾ...
ಚಂದ್ರ ತಾರೆಗಳ ತೊರುತ್ತ
ಅಲ್ಲಿದೆ ನಮ್ಮ ಮನೆಯನ್ನುತ್ತ
ಕನಸಿನ ತೀರಕ್ಕೆ ಕರೆದವಳು
ನಿನೆನಾ... ನಿನೆನಾ....
- ಕುಮಾರ ಸಿದ್ದರಾಜ
24 Feb 2017, 08:51 pm
Download App from Playstore: