ಅವಳೀಗ..

ಮೌನ ಹೆಪ್ಪುಗೆಟ್ಟುವಾಗ ನನ್ನ ಮಾತು ಮಡಿಗಟ್ಟುತ್ತದೆ ....!!!
ಸೂತಕದ ಕೋಲ ತೊಡಿಸಿ ಮರೆವು ತೂಫಾಕಿಯ ಗುಂಡು ತುಂಬಿಸಿಟ್ಟಿದ್ದಾಳೆ....!!
ಬಯಕೆಗೆಲ್ಲ ಬೇಲಿ ಹಾಕಿಸಿ ಬಂಜರು ಜಡದ ಹರಾಜು ಶುರು ಮಾಡಿದ್ದಾಳೆ..!!!
ನೆನಪುಗಳು ಕೊಳೆತು ನಾರುತಿರಲು ಅವಳೀಗ ಅತ್ತರ್ ಮೆತ್ತಿದ ದುಲ್ಹನ್ ಆಗುತ್ತಾಳೆ....!
ಬರ್ಖಾಸ್ ಆದ ಎದೆಯೊಳಗೀಗ ಸುಳ್ಳು ಗಡಿಯಾರದ ಮುಳ್ಳು ತಿರುಗಾಡುತ್ತಿದೆ....!

ಅವಿಜ್ಞಾನಿ

- ಅವಿಜ್ಞಾನಿ

24 Feb 2017, 09:02 pm
Download App from Playstore: