ಬೇರು ಸಾಯುವುದೇ.........???

ಆ ಬೇಸಿಗೆ ಹೋಗಾಯ್ತು
ಮಳೆಗಾಲ ಬಂದಾಯ್ತು
ಯಾವುದೋ ಮರದಿಂದ ಒಂದು ಬೀಜ
ಜೋರು ಬೀಸುವ ಗಾಳಿಯೋಡನೆ ಬಂದು
ಈ ಭೂಮಿಯ ಮೇಲೆ ಬಿದ್ದಾಯ್ತು.....

ಬೀಜದ ಮೋಳಕೆ ಹೋಡೆದಾಯ್ತು
ಭೂಮಿಯೋಳಗೆ ತನ್ನ ಬೇರನ್ನ ಬಿಟ್ಟಾಯ್ತು
ಬೀಜ ಗಿಡವಾಗಿ ಬೆಳೆಯುತ್ತಿದೆ
ಇದಕ್ಕೆ ಯಾರು ಅಡ್ಡಿಪಡಿಸುವರಿಲ್ಲ..?
ಇದನ್ನ ಯಾರು ಪ್ರಶ್ನಿಸುವರಿಲ್ಲ..?

ಗಿಡವು ಮರವಾಗಿ ಬೆಳೆಯುತ್ತಿದೆ
ಮರವು ಜೋರು ಗಾಳಿ ಬೀಸದೆಂದು
ಒಮ್ಮೆ ಒಮ್ಮೆ ಗಾಳಿಯೇ ಬೀಸದೆಂದು
ಇದು ನಿಷ್ಪ್ರಯೋಜಕಾರಿ ಯಾದುದೆಂದು
ಮರವನ್ನ ಟೀಕಿಸಲು ತೋಡಗುವರು

ಮರವನ್ನ ಹಲವರು ಪೂಜಿಸುವರು
ಕೆಲವರು ತಲೆಯೇ ಕೆಡಿಸಿಕೋಳ್ಳರು
ಉಳಿದವರಂತು ಮರವನ್ನೇ ಕತ್ತರಿಸಬೇಕೆನ್ನುವರು
ಇವರ ಮಾತು ಕೇಳಿ.........
ಪೂಜಿಸುವ ಮರವನ್ನ ಕಡಿದುರುಳಿಸುವರು

ಮರವನ್ನ ಕತ್ತರಿಸದರೇನಾಯ್ತು
ತನ್ನ ಬೇರು ಭೂಮಿಯೋಳಗೆ ಇದ್ದಾಯ್ತು
ಮತ್ತೆ ಮಳೆಗಾಲ ಬಂದಾಯ್ತು
ಮೋಳಕೆಯ ಚಿಗರು ಹೋರಬಂದಾಯ್ತು
ಉರುಳಿಸಿದ ಮರ ಬೆಳೆದಾಯ್ತು......

ಮರವನ್ನ ಮತ್ತೆ ಮತ್ತೆ ಉರುಳಿಸುವರು
ಎಷ್ಟು ಬಾರಿ ಉರುಳಿಸಿದರೇನಾಯ್ತು
ಭೂಮಿತಾಯಿ ಬೇರಿಗೆ ಅಸ್ತಿತ್ವ ನೀಡಾಯ್ತು
ಕಡಿದಷ್ಟು ಹೋಸತನದ ಚಿಗುರು ಹೆಚ್ಚಾಯ್ತು ಜೀವಕೋಟ್ಟ ತಾಯಿ ಬೇರು ಸಾಯುವುದುಂಟೇ...

- ಅಗಸ್ತ್ಯ

26 Feb 2017, 11:48 am
Download App from Playstore: