ಫೇಸ್ ಬುಕ್ ಹಾವಳಿ

ಎಲ್ಲೆಲ್ಲೂ ಫೇಸ್‌ಬುಕ್‌ ಹಾವಳಿ
ಯಾರಿಗೂ ಇಲ್ಲ ಸಮಾಜದ ಕಳಕಳಿ,
ಕೂಡಿ ಎಲ್ಲರೂ ಫೇಸ್‌ಬುಕ್‌ನ ಸಂಗ,
ಹಾಳಾಗುತ್ತಿದೆ ಇಂದು ಯುವಜನಾಂಗ.

ಮನೆ ಮನಗಳಲ್ಲೊಂದು ಕಂಪ್ಯೂಟರ್,
ಜೋಡಿಸಿಹರು ಅಂತರ್ಜಾಲದ ಕನೆಕ್ಟರ್,
ತೆರೆದಿಹರು ಫೇಸ್‌ಬುಕ್ ನಲ್ಲೋಂದು ಅಕೌಂಟ್,
ಕಂಡಕಂಡವರೊಂದಿಗೆ ನಡೆಸಿಹರು ಚಾಟ್.

ಪ್ರತಿ ಕೈಯಲ್ಲಿ ನಲಿದಾಡುತಿಹುದು ಮೊಬೈಲ್,
ಓಡಾಡುತಿಹುದು ಪರದೆಯ ಮೇಲೆ ಬೆರಳ್,
ಅಕ್ಕಪಕ್ಕದಲ್ಲಿ ದ್ದರು ತಂದೆ-ತಾಯಿ,
ದೂರದಲ್ಲಿರುವರಿಗೆ ಹೇಳುವರು ಹಾಯ್.

ಸಿಕ್ಕ ಸಿಕ್ಕ ಇಮೇಜ್ ಗಳ ನೋಡುತ,
ಇಷ್ಟ ಬಂದಂತೆ ಲೈಕ್ ಮಾಡುತ,
ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ,
ಸಾಗುತಿದೆ ಇಂದು ಸಮಯವ ಹಾಳುಗೆಡುತ.

ಇನ್ನಾದರು ನಿಲ್ಲಲಿ ಫೇಸ್‌ಬುಕ್‌ ಹಾವಳಿ,
ಸ್ವಲ್ಪ ವಾದರು ಇರಲಿ ಸಮಾಜದ ಕಳಕಳಿ,
ಹೀಗಾಗದಿರಲಿ ನಮ್ಮ ಜೀವನ ವ್ಯರ್ಥ,
ಜೀವನಕ್ಕೊಂದು ಬರಲಿ ಪರಿಪೂರ್ಣ ಅರ್ಥ.

- ರವೀಂದ್ರಬಾಪೂರ(GNL)

26 Feb 2017, 03:12 pm
Download App from Playstore: