ನಿನ್ನ ನೆನಪಲ್ಲಿ ಕವಿತೆ

ಗೆಳೆಯ ಬರೆಯಲೇನು ನಾನು
ಸಾವಿರ ಪದಗಳ ಒಂದು ಕವಿತೆ!!
ಕೇಳದೇ‌ ನೀ ಸುರಿದ‌ ಒಲವಿನ
ಧಾರೆಯ ಸುಂದರ ಕವಿತೆ!!

ಕಪಟವಿಲ್ಲದೇ‌ ನೀ ನುಡಿದ
ನುಡಿ ಮುತ್ತುಗಳ ಕವಿತೆ!!
ನಿನ್ನನ್ನು ಕಂಡು ನನ್ನ ಹೃದಯ
ನಲಿದು ಮಿಡಿದು ನುಡಿದ ಕವಿತೆ!!

ನಿನ್ನನ್ನು ನೆನೆದು ನನ್ನ ಮನ
ಸಾವಿರ ಕನಸನ್ನು ಹೆಣೆದ ಕವಿತೆ!!
ನಿನ್ನ ನೆನಪಿನಲ್ಲಯೇ ನಾ ಅದೆಷ್ಟೋ
ಇರುಳನ್ನು ಕಳೆದಿರುವ ಕವಿತೆ!!

ನಿನ್ನನ್ನು ಹುಡುಕುತಲಿ ಈ ನನ್ನ
ಕಣ್ಣುಗಳು ಅಲೆದಾಡಿದ ಕವಿತೆ!!
ನಾ ಮೌನವಾಗಿದ್ದೇ ನಿನ್ನ ಪ್ರೀತಿಗೆ
ಸಮ್ಮತಿ ನೀಡಿದ್ದ ಕವಿತೆ!!

ಕೊನೆಗೊಮ್ಮೆ ನೀ ದೊರೆತಾಗ ನಿನ್ನ
ಜೊತೆಗೂಡಿ ಸಂಭ್ರಮಿಸಿದ ಕವಿತೆ!!
ನಿನ್ನ ಬಾಹುಬಂಧದಲ್ಲಿ ನಾನು
ಈ ಲೋಕವನ್ನೇ ಮರೆತ ಕವಿತೆ!!

- ಪಿ.ಜಿ.ಜ್ಯೋತಿ

27 Feb 2017, 09:35 am
Download App from Playstore: