ಒಂಟಿ ಹಂಸ

ಕೊಳಕು ಕೊಳದಲಿ ಬಿಳಿಯ ಹಂಸ
ಮನೆಯ ಮಾಡಿ ಅದರ ವಾಸ!!
ಬಿದಿರ ಬುಡದಲಿ ಕೆದರಿದ ಗುಳಿ
ಮೊಟ್ಟೆ ಇಹುದು ಅದರ ವಂಶ!!

ಜೊತೆಗೆ ನಡೆದ ಪತಿಯ ಮರಣದಿ
ನೊಂದು ಬದುಕಿದೆ ಒಂಟಿತನದಲಿ!!
ಗರ್ಭದಿ ಇರುವ ಕುಡಿಯ ಸಲಹಲು
ಅರಸಿ ಬಂದಿತು ಪುಟ್ಟ ಆಶ್ರಯ!!

ಎಲ್ಲ ಕೊಳದಲೂ ಜೋಡಿ ಹಂಸವ
ಕಂಡು ಮರುಗಿತು ನೆನೆದು ಇನಿಯನ!!
ದೂರ ಹೋಗುವ ಮನಸು ಮಾಡಿ
ಹುಡುಕಿ ಬಂದಿದೆ ಕೊಳಕು ಕೊಳವನು!!

ಕೊಳಕು ಕೊಳದಲಿ ಈಜುತ ಆಡುತ
ಒಂಟಿತನದಲಿ ಸುಖವ ಹುಡುಕಿದೆ!!
ಕರುಳ ಕುಡಿಗಳ ಹೊಣೆಯ ಹೊತ್ತು
ಬದುಕುತಿರುವುದು ಅರಸಿ ತುತ್ತು!!

- ಪಿ.ಜಿ.ಜ್ಯೋತಿ

27 Feb 2017, 10:50 am
Download App from Playstore: