ಅಮ್ಮ

ನನ್ನ ಬದುಕಿನ ದೇವತೆ
ಕೊಡುವಳು ಪ್ರೀತಿ ವಾತ್ಸಲ್ಯ ಮಮತೆ
ಹೊತ್ತಳು ನನ್ನ ನವ ಮಾಸ
ಇತ್ತಳು ಸಂಪೂರ್ಣ ಸುರಕ್ಷತೆಯ ವಾಸ
ಸಹಿಸಿದಳು ನೋವಿನ ಕಡಲ
ಗ್ರಹಿಸಿದಳು ಕೋಡುವೆಂದು ಒಡಲ
ಕೊಟ್ಟಳು ತನ್ನ ಪೂರ್ಣ ಮನಸ
ಬಿಟ್ಟಳು ತನ್ನ ಹಾದಿಯ ಕನಸ
ಹಿಡಿದಳು ಕೈ ಯ ಪ್ರತಿ ಹೆಜ್ಜೆಯಲಿ
ನುಡಿದಳು ದೈರ್ಯ ಪ್ರತಿ ನಡೆಯಲ್ಲಿ
ತಿದ್ದಿದಳು ನನ್ನ ಪ್ರತಿ ನುಡಿಯಲ್ಲಿ
ವಿತ್ತಳು ಬೆಂಬಲವ ಪ್ರತಿ ಕ್ಷಣದಲ್ಲಿ
ಸಾಧ್ಯ ವಿಲ್ಲ ನನ್ನಿಂದಾಳೆಯಲಾ ಪ್ರೇಮವ
ಸವಿಯುವೆನಾ ಮುಗ್ದತೆಯ ಮಾಧುರ್ಯವ

- ಅರುಣ್. ಕೆ. ಗಟ್ಟಿ. ಕಾಪಿಕಾಡ್

28 Feb 2017, 12:55 pm
Download App from Playstore: