ಅನ್ನದಾತ


ಭವದಿಂ ಬಸವಳಿದ
ಅನ್ನದಾತ
ಏಕಿಷ್ಠು ದುಖ್ಖೀಭವ?

ಹುಬ್ಬೇರಿಸುವಷ್ಟು
ಕಬ್ಬು ಬೆಳೆದರು
ಹಬ್ಬ ಮಾಡುವಷ್ಟು
ಹಣ ಬರಲಿಲ್ಲ
ಬಂದಷ್ಟು ಹಣ
ಕೊರಳಿನ ಕುಣಿಕೆಗೆ
ಸಾಕಾಯ್ತಲ್ಲ

ಬೇಡಿಕೊಂಡರು ಬಿಡಿಗಾಸು
ಕೊಡದ ಜನ
ಸತ್ತಾಗ ಸಾಲವಿತ್ತು ಎಂದಾಡಿಕೊಂಡರು
ಪರಿಹಾರದ ಬಿಡಿಗಾಸಿಗೆ
ಬಡಿದಾಡಿಕೊಂಡರು.

ಆಪತ್ಭಾಂದವ ಮತೀಭವ
ಆತ್ಮಹತ್ಯೇ ರೋಕೊಭವ
ಆತ್ಮಸ್ಥೈರ್ಯ ಭರೋಭವ
ಅನ್ನದಾತೋ ಸುಖೀಭವ

..........ಮಧುಗಿರಿ ಬದರಿ

- K.Badarinatha

30 Jul 2015, 03:04 pm
Download App from Playstore: